ನಿನ್ನೆಯಷ್ಟೇ ಜನ್ಮದಿನ, ಇಂದು ಸಾವು!; ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ..

Murder
Published on

ಬೆಳಗಾವಿ: ಸಮೀಪದ ಹತ್ತರಗಿ ಬಳಿ ಭಾನುವಾರ ರಾತ್ರಿ ಯುವಕನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಯಮಕನಮರಡಿ ನಿವಾಸಿ ವಿನಾಯಕ ಸೋಮಶೇಖರ ಹೋರಕೇರಿ (28) ಕೊಲೆಯಾದ ಯುವಕ.

ಈತ ಬೈಕ್​ನಲ್ಲಿ ಗ್ರಾಮಕ್ಕೆ ಮರಳುವಾಗ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿದರು. ತೀವ್ರ ರಕ್ತಸ್ರಾವದಿಂದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆರೋಪಿಗಳು ಪರಾರಿಯಾಗಿದ್ದಾರೆ.

ಈ ಯುವಕನ ಶನಿವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಆದರೆ ಇಂದು ದುಷ್ಕರ್ಮಿಗಳ ಮಾರಕಾಸ್ತ್ರಗಳಿಗೆ ಬಲಿಯಾಗಿ ಹೋಗಿದ್ದಾನೆ. ಯಮಕನಮರಡಿ ಪಿಎಸ್ಐ ಬಿ.ವಿ.ನಾಮಗೌಡಾ ಸ್ಥಳಕ್ಕೆ ಭೇಟ್ಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net