ಹಬ್ಬಕ್ಕೆ ನಾನೇ ಗೌರಿ ತರಬೇಕು ಅಂತ ಸಹೋದರಿಯರ ಗಲಾಟೆ: ತಂಗಿ ತಂದಿದ್ದಕ್ಕೆ ಅಕ್ಕ ಆತ್ಮಹತ್ಯೆ!

Rukmini
Published on

ಬೆಳಗಾವಿ: ಗೌರಿ-ಗಣೇಶ ಹಬ್ಬ ಆಚರಣೆಯಲ್ಲಿನ ಮೇಲಾಟಕ್ಕೆ ಸಹೋದರಿಯರಲ್ಲಿ ಒಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಗೌರಿಯನ್ನು ನಾನೇ ತರಬೇಕು ಎಂದು ಹಠಕ್ಕೆ ಬಿದ್ದ ಅಕ್ಕ, ಕೊನೆಗೂ ಆ ಅವಕಾಶ ತನಗೆ ಸಿಗದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯನಕನಮರಡಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಅಕ್ಕ ರುಕ್ಮಿಣಿ ತೊಗರೆ ಆತ್ಮಹತ್ಯೆ ಮಾಡಿಕೊಂಡಾಕೆ. ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಲುವಾಗಿ ಮನೆಗೆ ಗೌರಿ ತರುವ ವಿಚಾರವಾಗಿ ಅಕ್ಕ ರುಕ್ಮಿಣಿ ಮತ್ತು ತಂಗಿ ಸರಿತಾ ಮಧ್ಯೆ ಗಲಾಟೆ ನಡೆದಿತ್ತು.

ಪ್ರತಿವರ್ಷ ಮನೆಗೆ ಗೌರಿಯನ್ನು ಅಕ್ಕ ರುಕ್ಮಿಣಿ ತರುತ್ತಾಳೆ. ಪ್ರತಿ ಬಾರಿ ಮನೆಗೆ ಅಕ್ಕನೇ ಏಕೆ ಗೌರಿಯನ್ನು ತರಬೇಕು? ಈ ಬಾರಿ ನಾನೇ ತರುತ್ತೇನೆ ಎಂದು ತಂಗಿ ಸರಿತಾ ತಕರಾರು ತೆಗೆದಿದ್ದಳು. ಈ ಬಗ್ಗೆ ಸಹೋದರಿಯರ ನಡುವೆ ವಾಗ್ವಾದ ನಡೆದಿತ್ತು.

ಬಳಿಕ ಸರಿತಾ ಗೌರಿಯನ್ನು ಮನೆಗೆ ತಂದಿದ್ದಾಳೆ. ಇದನ್ನು ಕಂಡು ತೀವ್ರವಾಗಿ ಮನನೊಂದ ರುಕ್ಮಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net