ಗಂಗೊಳ್ಳಿ ದೇವಸ್ಥಾನದಲ್ಲಿ ಏಕಾಹ ಅಖಂಡ ಭಜನೆ

bhajane

ಗಂಗೊಳ್ಳಿ: ಗಂಗೊಳ್ಳಿ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಏಕಾಹ ಅಖಂಡ ಭಜನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಆರಂಭವಾಯಿತು.

ಬೆಳಗ್ಗೆ ದೇವತಾ ಪ್ರಾರ್ಥನೆ ಬಳಿಕ ಏಕಾಹ ಭಜನೆ ದೀಪ ಸ್ಥಾಪನೆ ಧಾರ್ಮಿಕ ವಿದಿವಿಧಾನ ನಡೆಯಿತು. ದೇವಸ್ಥಾನ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್, ಜಿ.ಪ್ರದೀಪ ಭಟ್ ಮತ್ತು ತಾಂತ್ರಿಕ ಜಿ.ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಅನುಷ್ಠಾನ ಜರುಗಿತು. ದೇವಸ್ಥಾನ ಆಡಳಿತ ಮಂಡಳಿ ಉಪಾಧ್ಯಕ್ಷ ಜಿ.ರಾಧಾಕೃಷ್ಣ ನಾಯಕ್ ದೀಪ ಪ್ರಜ್ವಲಿಸಿ ಭಜನೆಗೆ ಚಾಲನೆ ನೀಡಿದರು. ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ, ವಿರಾಟರೂಪ ದರ್ಶನ, ಸಂಜೆ ಮಕ್ಕಳ ಉತ್ಸವ ಮತ್ತಿತರ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಡಾ.ಕಾಶೀನಾಥ ಪೈ, ಜಿ.ಗೋವಿಂದ್ರಾಯ ಆಚಾರ್ಯ, ಯು.ಸುರೇಶ ಪೈ, ಬಿ.ವಾಸುದೇವ ಪಡಿಯಾರ್, ಜಿ.ರಾಮಚಂದ್ರ ಪೈ, ಬಿ.ರಾಘವೇಂದ್ರ ಪೈ, ದೇವಸ್ಥಾನದ ವ್ಯವಸ್ಥಾಪಕ ಟಿ.ಶ್ರೀಕರ ಶೆಣೈ, ಜಿ.ಸಂದೀಪ ನಾಯಕ್, ಜಿ.ಮಾಧವ ಪೈ, ಜಿ.ಶ್ರೀನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು. ಡಿ.12ರಂದು ಬೆಳಗ್ಗೆ ಮುಕ್ಕೋಟಿ ಉತ್ಸವ, ದೀಪ ವಿಸರ್ಜನೆ, ಮಧ್ಯಾಹ್ನ ಪೂಜೆ, ಸಂಜೆ ಪಲ್ಲಕಿ ಉತ್ಸವ ನಡೆಯಲಿದೆ.

16ರಿಂದ ಬಸ್ರೂರು ದೇವಳ ರಜತ ಮಹೋತ್ಸವ

 

ಕುಂದಾಪುರ ಶಾಲೆ ವಾರ್ಷಿಕೋತ್ಸವ

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…