16ರಿಂದ ಬಸ್ರೂರು ದೇವಳ ರಜತ ಮಹೋತ್ಸವ

narayani
ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವರು.
Published on

ಗಂಗೊಳ್ಳಿ: ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಜೀರ್ಣೋದ್ಧಾರ ಪುನಃ ಪ್ರತಿಷ್ಠಾಪನಾ ರಜತ ಮಹೋತ್ಸವ 2024 ಮತ್ತು ಸಹಸ್ರಾಧಿಕ ಅಷ್ಟೋತ್ತರ ಶತ (1008) ಸುವರ್ಣ ಸಹಿತ ರಜತ ಕಲಶಾಭಿಷೇಕ ಸಮರ್ಪಣ ಮಹಾಸೇವಾ ಕಾರ್ಯಕ್ರಮ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಡಿ.16ರಿಂದ 18ರವರೆಗೆ ನಡೆಯಲಿದೆ.

16ರಂದು ಬೆಳಗ್ಗೆ ಶ್ರೀ ದೇವತಾ ಪ್ರಾರ್ಥನೆ, ಮಹಾಸಂಕಲ್ಪದೊಂದಿಗೆ ಧಾರ್ಮಿಕ ಅನುಷ್ಠಾನ ಪ್ರಾರಂಭಗೊಳ್ಳಲಿದ್ದು, ಧ್ವಜಾರೋಹಣ, ಅಂಕುರಾರೋಹಣ, ಕಲಶ ಪ್ರತಿಷ್ಠಾಪನಾ, ಪ್ರಧಾನ ಹವನ, ಲಘು ಪೂರ್ಣಾಹುತಿ, ಪಂಚಾಶತ್ ಕಲಶಾಭಿಷೇಕ, ಮಂಗಳಾರತಿ, ಸಂಜೆ ಶಾಂತಿ ಪಾಠ, ವಸಂತ ಪೂಜೆ ನಡೆಯಲಿದೆ.

17ರಂದು ಬೆಳಗ್ಗೆ ಸಾನ್ನಿಧ್ಯ ಹವನ, ಮೂಲಮಂತ್ರಾದಿ ಹವನ, ಲಘು ಪೂರ್ಣಾಹುತಿ, ಮಹಾ ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಮಹಾಮಂಗಳಾರತಿ, ಸಂಜೆ ವಸಂತ ಪೂಜೆ, ರಾತ್ರಿ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

18ರಂದು ಬ್ರಾಹ್ಮೀ ಮುಹೂರ್ತದಿಂದ ಸಾನ್ನಿಧ್ಯ ಹವನ, ವಿಶೇಷ ಹವನ, ಪ್ರಾಯಶ್ಚಿತ್ತ ಹೋಮ, 9 ಗಂಟೆಗೆ ಮಹಾಪ್ರಾರ್ಥನೆ, ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಗಮನ, ದೇವರ ಭೇಟಿ, 10 ಗಂಟೆಯಿಂದ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರಿಂದ ದೇವಿಗೆ ಸಹಸ್ರಾಧಿಕ ಅಷ್ಟೋತ್ತರ ಶತ (1008) ಸುವರ್ಣ ಸಹಿತ ರಜತ ಕಲಶಾಭಿಷೇಕ, ಉಭಯ ದೇವರಿಗೆ ಸುವರ್ಣ ಹಾರ ಸಮರ್ಪಣೆ, ಪ್ರಸನ್ನ ಪೂಜೆ, ಅಷ್ಟಮಂಗಲ ನಿರೀಕ್ಷಣೆ, ಪಟ್ಟಕಾಣಿಕೆ ಅರ್ಪಣೆ, ಸಭಾ ವೇದಿಕೆಯಲ್ಲಿ ಶ್ರೀ ಗುರು ಅಗ್ರ ಪೂಜಾ, ವಿಶೇಷ ಸೇವಾದಾರರಿಗೆ ಪ್ರಸಾದ, ಶ್ರೀಗಳಿಂದ ಅನುಗ್ರಹ ಆಶೀರ್ವಚನ ನಡೆಯಲಿದೆ.

ಬಳಿಕ ಮಹಾಪೂರ್ಣಾಹುತಿ, ಧ್ವಜಾವರೋಹಣ, ಮಹಾಮಂಗಳಾರತಿ, ಸೇವಾ ಪ್ರಸಾದ ವಿತರಣೆ, ಸಂಜೆ 7 ಗಂಟೆಗೆ ರಜತ ಪಲ್ಲಕಿ ಉತ್ಸವ, ವಸಂತ ಪೂಜೆ, ರಾತ್ರಿ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಡಿ.16ರಿಂದ 18ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಳ ಧರ್ಮದರ್ಶಿ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net