

ಅಮೆರಿಕಾ: ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಖರೀದಿಸಲು ಪೈಪೋಟಿ ಇರುತ್ತದೆ. ಈಗ ಇಂತಹದ್ದೇ 96 ವರ್ಷ ಹಳೆಯ ಮಕಲನ್ ಅದಾಮಿ 1926 ಸಿಂಗಲ್ ಮಾಲ್ಟ್ ವಿಸ್ಕಿ ಬಾಟಲಿಯೊಂದನ್ನು ಇದೇ ನವೆಂಬರ್ 18ರಂದು ಲಂಡನ್‌ನಲ್ಲಿ ಸೋಥೆವಿಯ ಸ್ಪಿರಿಟ್ಸ್ ಸಂಸ್ಥೆ ಹರಾಜಿಗಿಡಲಾಗಿದೆ.
12 ಕೋಟಿ ರೂ. ಬೆಲೆ ಬಾಳುವ ವಿಸ್ಕಿ: ಮಕಲನ್ ಅದಾಮಿ 1926 ನ್ನು ಪ್ರಪಂಚದ ಅತ್ಯಂತ ಬೆಳೆಬಾಳುವ ಸ್ಕಾಚ್ ವಿಸ್ಕಿಗಳಲ್ಲಿ ಒಂದಾಗಿದೆ. ಈ ಮೊದಲು ಇದೇ ಬ್ರಾಂಡ್ನ ವಿಸ್ಕಿಯನ್ನು ಸುಮಾರು 15 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಸ್ಕಾಚ್ ವಿಸ್ಕಿ ಎಂಬ ದಾಖಲೆಯನ್ನು ಮಾಡಿದೆ. ಈ ವಿಂಟೇಜ್ ಸ್ಕಾಚ್ ವಿಸ್ಕಿಯ ಬೆಲೆ ಬರೋಬ್ಬರಿ12 ಕೋಟಿ ರೂಪಾಯಿಗಳಷ್ಟು ಎಂದು ಅಂದಾಜಿಸಲಾಗಿದೆ.
ಮಕಲನ್ ಅದಾಮಿ 1926 ವಿಶ್ವದ ಅಪರೂಪದ ವಿಸ್ಕಿ: ಈ ವಿಂಟೇಜ್ ಸ್ಕಾಚ್ ವಿಸ್ಕಿಯನ್ನು ಪ್ರಪಂಚದ ಅಪರೂಪದ ಹಾಗೂ ಬೆಲೆಬಾಳುವ ವಿಸ್ಕಿಗಳಲ್ಲಿ ಒಂದು. ಈವರೆಗೆ ಕೇವಲ 40 ಬಾಟಲಿ ಮಕಲನ ಬ್ರಾಂಡ್ ವಿಸ್ಕಿಗಳನ್ನು ಮಾತ್ರ ಉತ್ಪಾದಿಸಲಾಗಿದ್ದು, ಆರು ದಶಕಗಳ ಶೆರ್ರಿ ಕಂಟೇನರ್ನಲ್ಲಿ ಪಕ್ವಗೊಳಿಸಿ ನಂತರ ಈ ವಿಸ್ಕಿಯನ್ನು 1986 ಬಾಟಲಿಗಳಿಗೆ ತುಂಬಿಸಲಾಯಿತು.
40 ಬಾಟಲಿಗಳಲ್ಲಿ ಇದುವರೆಗೆ ಕೇವಲ ಒಂದು ಬಾಟಲಿ ವಿಸ್ಕಿಯನ್ನು ಮಾತ್ರ ತೆರೆದು ಸೇವಿಸಲಾಗಿದೆ. ಇದೇ ಕಾರಣಕ್ಕಾಗಿ ಮಕಲನ ಅದಾಮಿ ಇಷ್ಟೊಂದು ಬೆಲೆಬಾಳುವ ವಿಸ್ಕಿಯಾಗಿದೆ. ಈಗ ಈ ದುಬಾರಿ ಬೆಲೆ ಬಾಳುವ ವಿಸ್ಕಿಯನ್ನು ವೆಂಬರ್ 18ರಂದು ಲಂಡನ್‌ನಲ್ಲಿ ಸೋಥೆವಿಯ ಸ್ಪಿರಿಟ್ಸ್ ಸಂಸ್ಥೆ ಹರಾಜಿಗಿಡಲಾಗಿದೆ.
ಇಟಾಲಿಯನ್ ಕಲಾವಿದ ವ್ಯಾಲೆರಿಯೊ ಅಡಾಮಿ ವಿನ್ಯಾಸಗೊಳಿಸಿದ ಲೇಬಲ್ ಹೊಂದಿರುವ ಸರಣಿಯ ಕೇವಲ 12 ಬಾಟಲಿಗಳಲ್ಲಿ ಹರಾಜು ಮಾಡಲಿರುವ ಬಾಟಲಿಯು ಒಂದಾಗಿದೆ. ಇದು ವಿಶ್ವಪ್ರಸಿದ್ಧ ಮಕಲನ್ ಡಿಸ್ಟಿಲರಿಯಿಂದ ಮರು ಕಂಡೀಷನಿಂಗ್ ಮಾಡಿದ ಮೊದಲ ಬಾಟಲಿಯಾಗಿದೆ. ಈ "ರೀಕಂಡಿಷನಿಂಗ್" ಕ್ಯಾಪ್ಸುಲ್ ಮತ್ತು ಕಾರ್ಕ್ ಅನ್ನು ಬದಲಿಸುವುದರ ಜೊತೆಗೆ ಬಾಟಲ್ ಲೇಬಲ್ಗಳನ್ನು ಸರಿಪಡಿಸುವುದನ್ನು ಒಳಗೊಂಡಿತ್ತು. ಬಹುನಿರೀಕ್ಷಿತ ಹರಾಜು 2023 ನವೆಂಬರ್ 18ರಂದು ಲಂಡನ್‌ನಲ್ಲಿ ನಡೆಯಲಿದೆ.