ಮೋದಿ ವಾಟ್ಸ್​ಆ್ಯಪ್​ ಚಾನೆಲ್​ಗೆ ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್; ಸಿಎಂಗಳ ಪೈಕಿ ಸಿದ್ದರಾಮಯ್ಯ ಮೊದಲಿಗರು!

PM CM whatsapp channel
Published on

ಬೆಂಗಳೂರು: ಮೆಸೇಜಿಂಗ್ ಆ್ಯಪ್​ಗಳ ಪೈಕಿ ಮುಂಚೂಣಿಯಲ್ಲಿರುವ ವಾಟ್ಸ್​ಆ್ಯಪ್ ಹೊಸದಾಗಿ ಬಿಟ್ಟಿರುವ ಚಾನೆಲ್ ಫೀಚರ್​ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಇದನ್ನು ಬಳಕೆದಾರರಿಗೆ ಈ ಫೀಚರ್​ ನೀಡಲಾಗಿದ್ದು, ಜನರು ಇದರ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.

ವಿಶೇಷವೆಂದರೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾಟ್ಸ್​ಆ್ಯಪ್ ಚಾನೆಲ್ ಕ್ರಿಯೇಟ್ ಆಗಿದ್ದು, ಒಂದು ದಿನ ಕಳೆಯುವಷ್ಟರಲ್ಲಿ ಅದಕ್ಕೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಆಗಿದ್ದಾರೆ. ಸದ್ಯ ಮೋದಿಗೆ ವಾಟ್ಸ್​ಆ್ಯಪ್ ಚಾನೆಲ್​ನಲ್ಲಿ 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಹೀಗೆ ಪ್ರಧಾನಿ ಮೋದಿ ವಾಟ್ಸ್​ಆ್ಯಪ್ ಚಾನೆಲ್​ನಲ್ಲಿ ಮೋಡಿ ಮಾಡಿದ್ದಾರೆ.

ಇತ್ತ ಸಿದ್ದರಾಮಯ್ಯ ವಾಟ್ಸ್​ಆ್ಯಪ್ ಚಾನೆಲ್ ಹೊಂದಿದ ಮುಖ್ಯಮಂತ್ರಿಗಳ ಪೈಕಿ ಮೊದಲಿಗರು ಎನಿಸಿಕೊಂಡಿದ್ದಾರೆ. ಸದ್ಯ ದೆಹಲಿ, ಉತ್ತರಪ್ರದೇಶ, ಗುಜರಾತ್, ಪಂಜಾಬ್​ ಮುಖ್ಯಮಂತ್ರಿಗಳು ವಾಟ್ಸ್​ಆ್ಯಪ್​ನಲ್ಲಿ ಚಾನೆಲ್ ಹೊಂದಿದ್ದಾರೆ. ಆದರೆ ಇವರೆಲ್ಲರಿಗಂತಲೂ ಮೊದಲು ವಾಟ್ಸ್ಆ್ಯಪ್ ಚಾನೆಲ್ ಹೊಂದಿರುವ ಮುಖ್ಯಮಂತ್ರಿ ಎಂದರೆ ಕರ್ನಾಟಕದ ಸಿದ್ದರಾಮಯ್ಯ. ಸದ್ಯ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾಟ್ಸ್​ಆ್ಯಪ್​ ಚಾನೆಲ್ ಇದ್ದರೂ ಪ್ರಧಾನಮಂತ್ರಿಯ ಅಧಿಕೃತ ವಾಟ್ಸ್​ಆ್ಯಪ್ ಚಾನೆಲ್ ಇನ್ನೂ ಕ್ರಿಯೇಟ್ ಆಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ವಾಟ್ಸ್​ಆ್ಯಪ್ ಚಾನೆಲ್​ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ: https://whatsapp.com/channel/0029Va8IaebCMY0C8oOkQT1F

ಕರ್ನಾಟಕದ ಮುಖ್ಯಮಂತ್ರಿ ವಾಟ್ಸ್​ಆ್ಯಪ್ ಚಾನೆಲ್​ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ: https://whatsapp.com/channel/0029Va71PkqBKfi3ZmSit71u

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net