

ಪಡುಬಿದ್ರಿ: ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸಿ ಆಟ ಆಡಿಸುತ್ತಿದ್ದ ಉಚ್ಚಿಲದ ಮನೋಜ್ ಕುಮಾರ್ ಎಂಬಾತನನ್ನು ಪಡುಬಿದ್ರಿ ಪೊಲೀಸರು ಸೋಮವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಉಡುಪಿಯ ಲಿಯೋ ಕರ್ನಲಿಯೋ ಎಂಬವರ ಅಣತಿಯಂತೆ ಆಟಕ್ಕೆ ಹಣ ಸಂಗ್ರಹಿಸುತ್ತಿರುವುದಾಗಿ ತಿಳಿಸಿರುವ ಆರೋಪಿಯಿಂದ ಆಟಕ್ಕೆ ಸಂಗ್ರಹಿಸಿದ ನಗದು, ಇತರ ಪರಿಕರಗಳು ಸೇರಿದಂತೆ ಸ್ಕೂಟರನ್ನು ಜಪ್ತಿ ಮಾಡಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.