ನಾಪತ್ತೆಯಗಿದ್ದ ಮಹಿಳೆ ಮೃತದೇಹ ಕೆರೆಯಲ್ಲಿ ಪತ್ತೆ

hand-dead-victim-woman-covered-600nw-2193737127
Published on

ಕಾಸರಗೋಡು: ನಾಪತ್ತೆಯಾಗಿದ್ದ ಪೈವಳಿಕೆ ಕಾಯರ್‌ಕಟ್ಟೆ ಸನಿಹದ ಮೂಡಂಬಿಕಾನ ನಿವಾಸಿ ದಿ.ಸತ್ಯನಾರಾಯಣ ಭಟ್ ಅವರ ಪತ್ನಿ ಶಂಕರಿ ಅಮ್ಮ(78) ಅವರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಮೇ 31ರಂದು ಅವರು ನಾಪತ್ತೆಯಾಗಿದ್ದು, ಈ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಹುಡುಕಾಟದ ಮಧ್ಯೆ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಠಾಣೆ ಪೊಲಿಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net