ಕಾರಿನ ಸ್ವಂಚಾಲಿತ ಡೋರ್​ ಗ್ಲಾಸ್​ನಲ್ಲಿ ಒಂದೂವರೆ ವರ್ಷದ ಮಗು ಸಿಲುಕಿ ಸಾವು! | Door Glass

dk - 2025-03-11T195218.820
Published on

Door Glass : ಕಾರಿನ ಸ್ವಂಚಾಲಿತ ಡೋರ್​ ಗ್ಲಾಸ್​​ನಲ್ಲಿ ಸಿಲುಕಿ ಒಂದುವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಇಲ್ಲಿನ ಚಕಿಯಾ ಗ್ರಾಮದ ರೋಷನ್​ ಎಂಬುವವರ ಸಹೋದರಳಿಯ ರೇಯಾಶ್ನಿ ಮೃತ ಮಗು. ಚಕಿಯಾದಿಂದ ಚಂಡಿದಿಹ್​ ಗ್ರಾಮಕ್ಕೆ ರೋಷನ್​ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ.

ನಡೆದಿದ್ದೇನು..?

ಕುಟುಂಬದ ಪ್ರಕಾರ, ಮಗು ರೇಯಾಶ್ನಿ ಕಿಟಕಿಯಿಂದ ತಲೆ ಹೊರ ಹಾಕಿ ಕೋತಿಗಳನ್ನು ನೋಡುತ್ತಿದ್ದ. ಏಕಾಏಕಿ ಕಾರ್​ ಸ್ಟಾಟ್​ ಆದ ಕಾರಣದಿಂದ ಸ್ವಯಂಚಾಲಿ ಡೋರ್​ ಗ್ಲಾಸ್​ ಇದಕ್ಕಿದ್ದಂತೆ ಮುಚ್ಚಿಕೊಂಡಿದೆ. ಇದರಿಂದಾಗಿ ಕುತ್ತಿಗೆ ಸಿಲುಕಿಗೊಂಡಿದೆ. ಕೂಡಲೇ ಮಗುವನ್ನು ಆಸ್ಪತ್ರೆ ದಾಖಲಿಸಿತಾದರೂ ಮೃತಪಟ್ಟಿರುವ ವಿಷಯ ವೈದ್ಯರು ತಿಳಿಸಿದ್ದಾರೆ.

ಈ ಘಟನೆಯ ನಂತರ, ಇಡೀ ಕುಟುಂಬದಲ್ಲಿ ದುಃಖ ಮಡುಗಟ್ಟಿದ್ದು, ಕುಟುಂಬದವರೂ ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಿಲ್ಲ. ಆದರೆ, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net