

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL) ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ರಿಟೇನ್ (Retain) ಹಾಗೂ ಮೆಗಾ ಹರಾಜಿನ (Mega Auction) ವಿಚಾರವಾಗಿ ಸಖತ್ ಸೌಂಡ್ ಮಾಡುತ್ತಿದೆ. ರಿಟೇನ್ಗೆ ಸಂಬಂಧಿಸಿದಂತೆ ಈಗಾಗಲೇ ತಂಡಗಳಿಗೆ ಅಕ್ಟೋಬರ್ 31ರ ಗಡುವು ನೀಡಲಾಗಿದ್ದು, ವರ್ಷಾಂತ್ಯದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವಿಚಾರ ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮಾಜಿ ನಾಯಕ ರೋಹಿತ್ ಶರ್ಮ (Rohit Sharma) ಚರ್ಚಾ ವಿಷಯವಾಗಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಕ್ಯಾಪ್ಟನ್ಸಿ ವಿಚಾರವಾಗಿ ರೋಹಿತ್ ಶರ್ಮ (Rohit Sharma) ಹೆಚ್ಚು ಸದ್ದು ಮಾಡಿದ್ದರು. ಏಕೆಂದರೆ ಮುಂಬೈ ತಂಡವನ್ನು ಐದು ಬಾರಿ ವಾಂಪಿಯನ್ ಪಟ್ಟಕೇರಿಸಿದ ಕೀರ್ತಿ ರೋಹಿತ್ ಅವರಿಗೆ ಸಲ್ಲುತ್ತದೆ. ಆದರೆ, ಹಾರ್ದಿಕ್ ಪಾಂಡ್ಯರನ್ನು (Hardik Pandya) ತಂಡಕ್ಕೆ ವಾಪಸ್ ಕರೆತರಲು ಮುಂದಾಗಿದ್ದ ಫ್ರಾಂಚೈಸಿಯು ರೋಹಿತ್ ಅವರನ್ನು ನಾಯಕನ ಪಟ್ಟದಿಂದ ಕೆಳಗಿಳಿಸಿ ಪಾಂಡ್ಯಗೆ ಕ್ಯಾಪ್ಟನ್ಸಿ ನೀಡುವ ಮೂಲಕ ಹಿಟ್ಮ್ಯಾನ್ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಬಳಿಕ ಅವರು ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದ್ದು, ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ (Mohammed kaif) ರೋಹಿತ್ ಶರ್ಮ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರನ್ನು ಆರ್ಸಿಬಿ ಖರೀದಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಆರ್ಸಿಬಿ ತಂಡದ ಮಾಜಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ (AB De Villiers) ಇದು ಅಸಾಧ್ಯ ಎಂದು ಹೇಳಿ ಕಾರಣವನ್ನು ನೀಡಿದ್ದಾರೆ.
ಈ ವಿಚಾರವನ್ನು ನಾನು ಕೇಳಿ ನಾನು ನಕ್ಕಿದೆ. ರೋಹಿತ್ ಶರ್ಮ (Rohit Sharma) ಏನಾದರೂ ಮುಂಬೈ ಇಂಡಿಯನ್ಸ್ ತೊರೆದು ಆರ್ಸಿಬಿ ಸೇರಿಕೊಂಡರೆ ಅದು ದೊಡ್ಡ ಸುದ್ದಿಯಾಗುತ್ತದೆ. ಇದು ಹಾರ್ದಿಕ್ ಪಾಂಡ್ಯ ಅವರ ನಡೆಗಿಂತ ದೊಡ್ಡದಾಗಿದೆ. ನನ್ನ ಪ್ರಕಾರ ರೋಹಿತ್ ರೋಹಿತ್ ಮುಂಬೈ ತೊರೆದು ಆರ್ಸಿಬಿ ಸೇರುವುದು ಅನುಮಾನವಾಗಿದ್ದು, ನನ್ನ ಪ್ರಕಾರ ಇದು ಅಸಾಧ್ಯವಾಗಿದೆ.
ವಯಸ್ಸು ಕೇವಲ ಒಂದು ಸಂಖ್ಯೆ, ಆತ 40 ವರ್ಷ ಸಮೀಪಿಸುತ್ತಿರುವುದು ಸಮಸ್ಯೆಯಾಗಬಹುದೆಂದು ನನಗೆ ಅರ್ಥವಾಗುತ್ತಿಲ್ಲ. ವಿರಾಟ್ ಅನೇಕ ಸೀಸನ್ ಐಪಿಎಲ್ ಆಡಿದ್ದು, ಆತನಿಗೆ ಹುಡುಗರು ಅಡ್ಕಸ್ಟ್ ಆಗಿದ್ದಾರೆ. ಆರ್‌ಸಿಬಿಗೆ ಟ್ರೋಫಿಯನ್ನು ಗೆದ್ದಿಲ್ಲ, ಆದರೆ ಆಟಗಾರನಾಗಿ ಅವರು ಅಸಾಧಾರಣರಾಗಿದ್ದಾರೆ, ವಿರಾಟ್ ಅವರ ಎಲ್ಲಾ ಅನುಭವದೊಂದಿಗೆ ಆತನನ್ನು ಬೆಂಬಲಿಸುತ್ತಾನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.