blank

ಬೇಯಿಸಿದ ಮೊಟ್ಟೆ vs ಆಮ್ಲೆಟ್​… ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Omelette vs Boiled Egg

Omelette vs Boiled Egg

Omelette vs Boiled Egg : ಮೊಟ್ಟೆಗಳು ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಪ್ರಮುಖ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ವಿವಿಧ ಕಾಯಿಲೆಗಳಿಂದ ದೂರವಿರಲು ಮೊಟ್ಟೆಯು ನಿಮಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಕೆಲವರು ಮೊಟ್ಟೆಯನ್ನು ಆಮ್ಲೆಟ್ ರೂಪದಲ್ಲಿ ತಿನ್ನಲು ಇಷ್ಟಪಡುತ್ತಾರೆ.

ಕೆಲವರು ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಾರೆ. ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಾಸ್ತವವಾಗಿ, ಎರಡೂ ಆರೋಗ್ಯಕರವಾಗಿವೆ ಮತ್ತು ಎರಡು ಕೂಡ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿವೆ.

ಬೇಯಿಸಿದ ಮೊಟ್ಟೆ ಮೊದಲ ಆಯ್ಕೆಯಾಗಿರಲಿ

ಬೇಯಿಸಿದ ಮೊಟ್ಟೆಗಳು ಆರೋಗ್ಯಕರ ಆಯ್ಕೆಯಾಗಿದೆ. ಏಕೆಂದರೆ ಅವುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಮೊಟ್ಟೆಯನ್ನು ಕುದಿಸುವುದರಿಂದ ಅದರ ಎಲ್ಲಾ ಪೋಷಕಾಂಶಗಳನ್ನು ಸಂರಕ್ಷಿಸಲ್ಪಡುತ್ತದೆ. ಇದು ತಿನ್ನಲು ಆರೋಗ್ಯಕರ ಆಯ್ಕೆಯಾಗಿದೆ. ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ವಿಟಮಿನ್ ಡಿ, ವಿಟಮಿನ್ ಎ, ವಿಟಮಿನ್ ಬಿ 12 ಮತ್ತು ವಿಟಮಿನ್ ಇ, ಆರೋಗ್ಯಕರ ಕೊಬ್ಬುಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಲ್ಲಿ ಅಧಿಕವಾಗಿವೆ. ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಆಗಿದ್ದು, ಎಲ್ಲ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದು ಸ್ನಾಯುಗಳ ಆರೋಗ್ಯ, ಬೆಳವಣಿಗೆ ಮತ್ತು ದೇಹದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂ ಪ್ರೇಯಸಿಯನ್ನು ಮದ್ವೆಯಾಗಲು ದುಬೈನಿಂದ ಭಾರತಕ್ಕೆ ಬಂದ ಪಂಜಾಬಿಗೆ ಕಾದಿತ್ತು ಬಿಗ್​ ಶಾಕ್​! Instagram Love

ಮೊಟ್ಟೆಯಲ್ಲಿ ಹೇರಳವಾಗಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿನ ಕಾರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಟ್ಟೆಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮೊಟ್ಟೆಗಳಲ್ಲಿನ ಉತ್ಕರ್ಷಣ ನಿರೋಧಕಗಳು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಬೇಯಿಸಿದ ಮೊಟ್ಟೆಗಳು ಕೋಲಿನ್ ಅನ್ನು ಹೊಂದಿರುತ್ತವೆ, ಇದು ಮೆದುಳಿನ ಆರೋಗ್ಯ ಮತ್ತು ಬೆಳವಣಿಗೆಗೆ ಬಹಳ ಮುಖ್ಯವಾಗಿದೆ.

ಆಮ್ಲೆಟ್​ ಹೀಗಿರಲಿ…

ಆಮ್ಲೆಟ್‌ ವಿಚಾರಕ್ಕೆ ಬರುವುದಾದರೆ, ಇದು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ. ಆದರೆ, ಆಮ್ಲೆಟ್​ಗೆ ತರಕಾರಿಗಳನ್ನು ಸೇರಿಸಿದರೆ ಮಾತ್ರ. ತರಕಾರಿ ಬದಲು ಬೆಣ್ಣೆ ಮತ್ತು ಅಡುಗೆ ಎಣ್ಣೆಗಳಂತಹ ಪದಾರ್ಥಗಳ ಬಳಕೆಯಿಂದಾಗಿ ಆಮ್ಲೆಟ್‌ಗಳಲ್ಲಿ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗುತ್ತದೆ.

ಯಾವುದು ಉತ್ತಮ?

ಶುದ್ಧ ಪೋಷಕಾಂಶಗಳ ವಿಚಾರದಲ್ಲಿ ಬೇಯಿಸಿದ ಮೊಟ್ಟೆಗಳು ತಿನ್ನಲು ತುಂಬಾ ಯೋಗ್ಯವಾಗಿದೆ. ಪೌಷ್ಟಿಕಾಂಶದ ಪದಾರ್ಥಗಳೊಂದಿಗೆ ಅಂದರೆ ತರಕಾರಿಗಳೊಂದಿಗೆ ತಯಾರಿಸಿದ್ದಲ್ಲಿ ಬೇಯಿಸಿದ ಮೊಟ್ಟೆಗಳಿಗಿಂತ ಆಮ್ಲೆಟ್ ಆರೋಗ್ಯಕರ ಆಯ್ಕೆಯಾಗಿದೆ. ಆದರೆ, ಎಣ್ಣೆ ಮತ್ತು ಚೀಸ್​ ಬಳಸಿ ಆಮ್ಲೆಟ್​ ತಯಾರಿದರೆ ಉತ್ತಮವಲ್ಲ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ನಿಮ್ಮ ಕಿಡ್ನಿಗಳಿಂದ ವಿಷ ಹೊರಹಾಕಬೇಕೇ? ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಮಿಸ್​ ಮಾಡಲೇಬೇಡಿ | Kidneys Health

ಪುಷ್ಪ ಚಿತ್ರದಲ್ಲಿ ತೋರಿಸಿರೋ ರಕ್ತಚಂದನ ನಿಜಕ್ಕೂ ಕೋಟಿಗಟ್ಟಲೆ ಬೆಲೆ ಬಾಳುತ್ತಾ? ಉಪಯೋಗವೇನು? ಇಲ್ಲಿದೆ ಅಚ್ಚರಿ ಮಾಹಿತಿ… Red Sandalwood

 

Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…