ಕಾಲ್ನಡಿಗೆಯಲ್ಲಿ ಕಚೇರಿ ತಲುಪಿದ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್​ ಅಬ್ದುಲ್ಲಾ | Omar Abdullah

Jammu and Kashmir, CM Omar Abdullah
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ(Omar Abdullah) ಅವರು ಶ್ರೀನಗರದಿಂದ ಜಮ್ಮುವಿನ ಸಿವಿಲ್ ಸೆಕ್ರೆಟರಿಯೇಟ್‌ಗೆ ಸೋಮವಾರ(ನವೆಂಬರ್​​ 11) ಕಾಲ್ನಡಿಗೆಯಲ್ಲಿ ರಸ್ತೆ ಪ್ರಯಾಣ ಕೈಗೊಂಡರು. ಅದಕ್ಕೂ ಒಂದು ದಿನ ಮುಂಚಿತವಾಗಿ ಜಮ್ಮು ವಿಮಾನ ನಿಲ್ದಾಣದಲ್ಲಿ ಕಳಪೆ ಗೋಚರತೆಯಿಂದಾಗಿ ಅವರ ವಿಮಾನವನ್ನು ರದ್ದುಗೊಳಿಸಲಾಗಿತ್ತು.

ಕಡಿಮೆ ಗೋಚರತೆಯಿಂದಾಗಿ ಹನ್ನೊಂದು ವಿಮಾನಗಳನ್ನು ಭಾನುವಾರ(ನವೆಂಬರ್​ 10) ರದ್ದುಗೊಳಿಸಲಾಗಿದೆ ಮತ್ತು ತಾಂತ್ರಿಕ ಕಾರಣಗಳಿಂದ ಇನ್ನೊಂದು ವಿಮಾನವನ್ನು ರದ್ದುಗೊಳಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಒಮರ್​ ಅಬ್ದುಲ್ಲಾ ಅವರ ಕಾಲ್ನಡಿಗೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಚಳಿಗಾಲದ ರಾಜಧಾನಿ ಶ್ರೀನಗರದಿಂದ ಜಮ್ಮುವಿಗೆ ತಮ್ಮ ಬೆಂಗಾವಲು ಪಡೆ ಹೋಗುವ ಮೂರು ವಿಡಿಯೋಗಳನ್ನು ಹಂಚಿಕೊಡಿದ್ದಾರೆ.

ಸೋಮವಾರ ಬೆಳಗ್ಗೆ ವೇಳಾಪಟ್ಟಿಯ ಪ್ರಕಾರ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net