ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ವಸತಿ ಸೌಕರ್ಯ ಸಮರ್ಪಕವಾಗಿಲ್ಲವೆಂದು ಹಲವು ಅಥ್ಲೀಟ್ ಗಳು ಅಸಂತೃಪ್ತಿ ವ್ಯಕ್ತಪಡಿಸಿರುವುದು ತಿಳಿದ ಸಂಗತಿಯೇ. ಇದೀಗ ಒಲಿಂಪಿಕ್ ಪದಕದ ಗುಣಮಟ್ಟದ ಬಗ್ಗೆ ಕ್ರೀಡಾಪಟುವಿನ ಪೋಸ್ಟ್ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ‘ 50 ಗ್ರಾಂ ತೂಕಕ್ಕೆ ಅನರ್ಹಗೊಂಡಿದ್ದೆ’: ವಿನೇಶ್ ಗೆ ದೈರ್ಯತುಂಬಿದ ಒಲಂಪಿಕ್ ಸ್ವರ್ಣಪದಕ ವಿಜೇತ
ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಕಂಚು ಗೆದ್ದ ಅಮೇರಿಕನ್ ಸ್ಕೇಟರ್ ನೈಜಾ ಹೂಸ್ಟನ್ ಪದಕದ ಫೋಟೋವನ್ನು ಹಂಚಿಕೊಳ್ಳುವಾಗ ಅದರ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಈ ಒಲಂಪಿಕ್ ಪದಕ ಪಳಪಳ ಹೊಳೆಯುವಂತಿತ್ತು. ಆದರೆ ನಾನು ಅದನ್ನು ಕೊರಳಿಗೆ ಹಾಕಿಕೊಂಡ ನಂತರ ಬಣ್ಣ ಹೋಗಿದೆ. ಎಂದು ಬಣ್ಣ ಕಳೆದುಕೊಂಡ ಪದಕದ ಫೋಟೋವನ್ನು ಹೂಸ್ಟನ್ ಹಂಚಿಕೊಂಡಿದ್ದಾರೆ.
ಕಳೆದ ವಾರ ನಡೆದ ಸ್ಟ್ರೀಟ್ ಸ್ಕೇಟ್‌ಬೋರ್ಡಿಂಗ್‌ನಲ್ಲಿ ಈ ಸ್ಕೇಟರ್ ಕಂಚಿನ ಪದಕ ಗೆದ್ದಿದ್ದಾರೆ.
ಈ ಬಗ್ಗೆ ಪ್ಯಾರಿಸ್ ಒಲಿಂಪಿಕ್ಸ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಮಗೆ ಇದರ ಬಗ್ಗೆ ತಿಳಿಯಿತು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಹಾಳಾದ ಪದಕಗಳ ಬದಲಿಗೆ ಹೊಸ ಪದಕ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಬ್ರಿಟನ್ ಪೌರತ್ವ ಪ್ರಕರಣ: ಪ್ರಧಾನಿ ಮೋದಿ, ಶಾ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಾನೂನು ಹೋರಾಟ!