25 ವರ್ಷ ಕಳೆದ್ರೂ ಮದುವೆ ಮಾಡಿಲ್ಲ ಎಂಬ ಸಿಟ್ಟಿನಲ್ಲಿ ಅಣ್ಣನನ್ನೇ ಮುಗಿಸಿಬಿಟ್ಟ ತಮ್ಮ!

crime guns
Published on

ಕೊಪ್ಪಳ: ತನಗೆ 25 ವರ್ಷ ಕಳೆದರೂ ಮದುವೆ ಮಾಡಲಿಲ್ಲ ಎಂಬ ಸಿಟ್ಟಿನಲ್ಲಿ ತಮ್ಮನೊಬ್ಬ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ಈ ಘಟನೆ ನಡೆದಿರುವುದು ಜಿಲ್ಲೆಯ ಜಿಲ್ಲೆಯ ಕುಷ್ಟಗಿ ತಾಲೂಕಿ‌ನ ಪಟ್ಟಲಚಿಂತಿ ಗ್ರಾಮದಲ್ಲಿ. ಯಮನೂರಪ್ಪ ಕಡಿವಾಲರ ಸ್ವಂತ ತಮ್ಮನಿಂದಲೇ ಹತ್ಯೆಗೀಡಾದ ಅಣ್ಣ.

ಆರೋಪಿ ಮಲ್ಲಪ್ಪ ಕಡಿವಾಲರ ಅಣ್ಣನೊಂದಿಗೆ ಅನ್ಯೋನ್ಯವಾಗಿಯೇ ಇದ್ದ. ಆದರೆ ಮನೆಯಲ್ಲಿ ಆಸ್ತಿ ಹಂಚಿಕೆ ಮಾಡು ಅಂತ ಆಗಾಗ ಅಣ್ಣನ ಜೊತೆ ಜಗಳ ಮಾಡಿಕೊಳ್ಳುತ್ತಿದ್ದ. ಅದರಂತೆ ಆಸ್ತಿ ಹಂಚಿಕೆ ಮಾಡಲಾಗಿತ್ತು, ಇದಾದ ಬಳಿಕ 25 ವರ್ಷ ವಯಸ್ಸಾದ್ರು ನನ್ನ ಮದುವೆ ಮಾಡಿಲ್ಲ, ಮದುವೆ ಮಾಡಿಸಿ ಎಂದು ಅಣ್ಣನೊಂದಿಗೆ ಗಲಾಟೆ ಮಾಡಲು ಆರಂಭಿಸಿದ್ದ.

ಅದರಂತೆ ನಿನ್ನೆ ಸಂಜೆ (ಫೆ..2) ಗಲಾಟೆ ಆರಂಭಿಸಿ, ತಾನು ಹುಡುಗಿಯೊಬ್ಬಳನ್ನು ನೋಡಿದ್ದೆನೆ, ಅವಳೊಟ್ಟಿಗೆ ಮದುವೆ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಣ್ಣ ಯಮನೂರಪ್ಪನಿಗೆ ಕಟ್ಟಿಗೆ ಹಾಗೂ ಚಾಕುವಿನಿಂದ ಇರಿದು ಭರ್ಬರವಾಗಿ ಕೊಲೆ ಮಾಡಿದ್ದಾನೆ.

ಕೊಲೆ ಆರೋಪಿ ಮಲ್ಲಪ್ಪ ಕಡಿವಾಲರ
ಕೊಲೆ ಆರೋಪಿ ಮಲ್ಲಪ್ಪ ಕಡಿವಾಲರ

ಸಾವನ್ನಪ್ಪಿರುವ ಯಮನೂರಪ್ಪ ಸೇರಿ ನಾಲ್ಕು ಜನ ಸಹೋದರರು, ಮೂರು ಜನರಿಗೆ ಈಗಾಗಲೇ ಮದುವೆಯಾಗಿದೆ. ಕೊನೆಯ ಸಹೋದರ ಮಲ್ಲಪ್ಪನಿಗೆ ಮನೆಯಲ್ಲಿ ಮದುವೆ ಮಾಡಿಸಲು ಮುಂದಾದಾಗ ನಿರಾಕರಿಸಿದ್ದ, ಆದರೆ ಒಂದು ವರ್ಷದ ನಂತರ ಮದುವೆ ಮಾಡಸುವಂತೆ ದುಂಬಾಲು ಬಿದ್ದಿದ್ದ, ಊರಲ್ಲಿ ಜಾತ್ರೆ ಇರುವ ಕಾರಣ ಜಾತ್ರೆಯೆಲ್ಲ ಮುಗಿದ ಬಳಿಕ ಮಾತನಾಡಿ ತೀರ್ಮಾನ ತಗೆದುಕೊಳ್ಳುವ ಯೋಚನೆ ಮಾಡಲಾಗಿತ್ತು ಎನ್ನಲಾಗಿದೆ. ಸದ್ಯ ಹನುಮಸಾಗ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net