ಎಣ್ಣೆ ಬಾಣಲೆಗೆ ಹಾರಿ ಪ್ರಾಣ ಬಿಟ್ಟ ಬೇಕರಿ ಕೆಲಸಗಾರ!

ಆತ್ಮಹತ್ಯೆ
Published on

ಗುರುಪುರ(ಮಂಗಳೂರು): ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರಿನಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾತ ಖಾದ್ಯ ತಿಂಡಿ ತಯಾರಿಸುವ ಎಣ್ಣೆ ಬಾಣಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಪೊಳಲಿ ನಿವಾಸಿ ಪುರಂದರ(50) ಮೃತಪಟ್ಟವರು.

ಮೃತ ಪುರಂದರ ಬೇಕರಿಯಲ್ಲಿ ಕೆಲವು ವರ್ಷದಿಂದ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಮಾನಸಿಕವಾಗಿ ಬಳಲಿದವರಂತೆ ಕಂಡು ಬರುತ್ತಿದ್ದರು. ಗುರುವಾರ ಮಧ್ಯಾಹ್ನ ಕಾರ್ವಿುಕರು ಬೇಕರಿಯಿಂದ ಹೊರಗಡೆ ಇದ್ದಾಗ ಬಾಗಿಲು ಹಾಕಿ ಉರಿಯುತ್ತಿದ್ದ ಎಣ್ಣೆ ಬಾಣಲೆಗೆ ಹಾರಿದ್ದಾರೆ.

ಮೈಯೆಲ್ಲ ಸುಟ್ಟ ಗಾಯಗಳೊಂದಿಗೆ ಬೊಬ್ಬಿಡುತ್ತಿದ್ದ ಪುರಂದರ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೊನೆಯುಸಿರೆಳೆದಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಬಜ್ಪೆ ಪೊಲೀಸರು ತಿಳಿಸಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net