

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಉಚಿತವಾದ ನಂತರ ನಾನಾ ರೀತಿಯ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ಕಡೆ ನಿರ್ವಾಹಕರಿಗೂ ಪ್ರಯಾಣಿಕರಿಗೂ ಜಗಳವಾದಲ್ಲಿ ಇನ್ನೂ ಕೆಲವು ಕಡೆ ನೂಕು ನುಗ್ಗಲು ಉಂಟಾಗುತ್ತಿದೆ. ಇಲ್ಲೊಬ್ಬರು ಅಜ್ಜಿ, ಹೇಗಿದ್ದರೂ ಉಚಿತ ಪ್ರಯಾಣ ಇದೆ ಎಂದು ಒಂದು ಬಸ್ಸನ್ನೇ ಬುಕ್ ಮಾಡಲು ಮಾಹಿತಿ ಕೇಂದ್ರಕ್ಕೆ ಬಂದಿದ್ದಾರೆ.
ಇಡೀ ಬಸ್ಸಿನ 48 ಸೀಟುಗಳನ್ನು ರಿಸರ್ವ್ ಮಾಡಲು ವಿಚಾರಣಾ ವಿಭಾಗಕ್ಕೆ ಬಂದು ವಿಚಾರಿಸಿದ ಅಜ್ಜಿಯ ಎಕ್ಸ್ಕ್ಲೂಸಿವ್ ದೃಶ್ಯಗಳು ದಿಗ್ವಿಜಯ ನ್ಯೂಸ್ಗೆ ಲಭಿಸಿವೆ.
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಖಾಸಗಿ ವಾಹನ ಮಾಲೀಕರಿಗೆ ಪೆಟ್ಟು.
ಮೆಜೆಸ್ಟಿಕ್ನ KSRTC enquiry ಕೌಂಟರ್ಗೆ ಬಂದ ಅಜ್ಜಿ ಸುನಂದಾ, ಯಾವ್ಯಾವ ಮಾರ್ಗಗಳಿಗೆ ಎಷ್ಟು ಘಂಟೆಗೆ ಬಸ್ಗಳ ವ್ಯವಸ್ಥೆಯಿದೆ ಎಂಬ ಮಾಹಿತಿ ಪಡೆದು ಪೇಪರ್ನಲ್ಲಿ ಬರೆದುಕೊಂಡಿದ್ದಾರೆ.
ಸುನಂದಾ ಬೆಂಗಳೂರಿನ ಬ್ಯಾಡರಹಳ್ಳಿಯ ನಿವಾಸಿಯಾಗಿದ್ದು ತಮ್ಮ ಇಡೀ ತಂಡದೊಂದಿಗೆ 4-5 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳ ವಿಸಿಟ್ಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರು ಸದ್ಯ 20 ಜನರ ತಂಡ ಮಾಡಿಕೊಂಡಿದ್ದು, ಇನ್ನೂ 20 ಜನರನ್ನು ಸೇರಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಅಜ್ಜಿಯ ಹಂಚಿಕೆ ಪ್ರಕಾರ ಮನೆಯ ಮಹಿಳಾ ಕುಟುಂಬಸ್ಥರು ಹಾಗೂ ಮಹಿಳಾ ಸಂಘ ಸಂಸ್ಥೆಯವರು ಸೇರಿ ಒಟ್ಟು 48 ಜನ್ರ ಸೀಟ್ ರಿಸರ್ವ್ ಮಾಡಿಕೊಳ್ಳಲಾಗುತ್ತದೆ. (ದಿಗ್ವಿಜಯ ನ್ಯೂಸ್)