ಕೋಟ: ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಕೋಟದ ಕಾಶೀಮಠದಲ್ಲಿ ಭಜನಾ ಸಪ್ತಾಹ, ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡವು.
ಮಂಗಳವಾರ ನಡೆದ ವಿಟ್ಲಪಿಂಡಿ ಮಹೋತ್ಸವ ಅಂಗವಾಗಿ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಣ್ಣ ಬಣ್ಣದ ನೀರಿನೊಂದಿಗೆ ಒಕುಳಿಯಾಟ ನಡೆಸಿದರು.
ಮಹಿಳೆಯರು ಭಜನೆ ನೃತ್ಯದ ಮೂಲಕ ದೇವರ ಆರಾಧನೆ ಮಾಡಿದರು. ಬಣ್ಣದ ನೀರನ್ನು ಪಾತ್ರೆಯಲ್ಲಿ ತುಂಬಿಸಿ ಭಜನೆ ನಿರತರಿಗೆ ಎರೆಯುವ ದೃಶ್ಯ ಗಮನಸೆಳೆಯಿತು. ಕೋಟ ಕಾಶೀಮಠದಿಂದ ಆರಂಭಗೊಂಡ ಓಕುಳಿ ಮೆರವಣಿಗೆ ಇಡೀ ಪೇಟೆಯಲ್ಲಿ ಮೇಳೈಸಿಕೊಂಡು ವರುಣತೀರ್ಥಕೆರೆಯಲ್ಲಿ ಸಂಪನ್ನಗೊಂಡಿತು.