

ಕೋಟ: ಜಿಲ್ಲೆಯಲ್ಲಿ ಐಟಿ ಬಿಟಿ ಕಂಪನಿಗಳು ಕಾಲಿರಿಸಿದರೆ ಹೈನುಗಾರಿಕೆ ತನ್ನಿಂತಾನೆ ಅಭಿವೃದ್ಧಿಗೊಳ್ಳುತ್ತದೆ ಎಂದು ಕೆ.ಎಂ.ಎಫ್ ವಿಸ್ತರ್ಣಾಧಿಕಾರಿ ಸರಸ್ವತಿ ಹೇಳಿದರು.
ಕೋಟ ಮಣೂರು ಮಹಾಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ಮಂಗಳವಾರ ಕೋಟದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಹೈನುಗಾರಿಗೆ ಮಾಹಿತಿ ನೀಡಿ, ಪ್ರಸ್ತುತ ಹೈನುಗಾರಿಕೆ ಕುಂಠಿತಗೊಳ್ಳುತ್ತಿದೆ ಇದಕ್ಕೆ ಕಾರಣ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವ ಹಿರಿಯರಿಗೆ ಹೊರ ನಾಡಿನಲ್ಲಿ ಉದ್ಯೋಗದಲ್ಲಿರುವ ಅವರ ಮಕ್ಕಳು ಮನೆಯವರನ್ನು ಹೈನುಗಾರಿಕೆ ತೊಡಗಿಕೊಳ್ಳದಂತೆ ತಡೆಯೊಡ್ಡುವ ಪ್ರಸಂಗ ಎದುರಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಜಿಲ್ಲೆಯಲ್ಲಿ ಐಟಿಬಿಟಿ ಕಂಪನಿಗಳು ಸ್ಥಾಪನೆಯಾದರೆ, ಅದರಲ್ಲಿ ಹೈನುಗಾರರ ಮಕ್ಕಳು ಕಾರ್ಯನಿರ್ವಹಿಸಿದರೆ ಮನೆಯವರು ಸ್ವಾವಲಂಬಿ ಬದುಕು ಕಂಡುಕೊಳ್ಳುತ್ತಾರೆ ಎಂದರು.
ಇದೇ ವೇಳೆ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಉತ್ಪಾದಕರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಶ್ರೀಕಾಂತ್, ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಕೃಷ್ಣ ದೇವಾಡಿಗ ವರದಿ ಮಂಡಿಸಿದರು. ಇತ್ತೀಚೆಗೆ ನಿಧನರಾದ ಸಂಘದ ಸದಸ್ಯರಾದ ಸದಾಶಿವ ಹೊಳ್ಳ, ರಾಮಕೃಷ್ಣ ಆಚಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಸಿಇಓ ರಾಜೇಶ್ ನಿರೂಪಿಸಿದರು. ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸಭೆ ನಿರ್ವಹಿಸಿದರು.