ಅಯ್ಯೋ.. ರಾಹುಲ್​ ದ್ರಾವಿಡ್​ ಕಾಲಿಗೆ ಗಾಯ!; ಆಗಿದ್ದಾದರೂ ಏನು? | Injured

dk-2025-03-12t222057984-67d1bb86da714
Published on

Injured: ಟೀಮ್​ ಇಂಡಿಯಾದ ಮಾಹಿ ಆಟಗಾರ ಹಾಗೂ ರಾಜಸ್ತಾನ ತಂಡದ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ತಮ್ಮ ಎಡಗಾಲಿಗೆ ಗಾಯವಾಗಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋವನ್ನು ರಾಜಸ್ತಾನ ರಾಯಲ್ಸ್​ ಪ್ರಾಂಚೈಸಿ ಪೋಸ್ಟ್​ ಮಾಡಿದೆ.

ರಾಹುಲ್​ಗೆ ಏನಾಯ್ತು..?

ಹೀಗಾಗಿ, ರಾಜಸ್ತಾನ ರಾಯಲ್ಸ್​ ತಂಡದ ಮುಖ್ಯ ಕೋಚ್ ರಾಹುಲ್ ಐಪಿಎಲ್ 2025 ಕ್ಕೂ ಮುನ್ನ ತಮ್ಮ ಪೂರ್ವ ತರಬೇತಿ ಶಿಬಿರದಿಂದ ಗಾಯದ ಕಾರಣದಿಂದಾಗಿ ಗೈರುಹಾಜರಾಗಿದ್ದರು. ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವಾಗ ದ್ರಾವಿಡ್ ಕಾಲಿಗೆ ಗಾಯವಾಗಿದೆ ಎಂದು ಪ್ರಾಂಚೈಸಿ ಹೇಳಿಕೊಂಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಆರ್‌ಆರ್ ಪೋಸ್ಟ್ ಮಾಡಿದ ಫೋಟೋದಲ್ಲಿ, ''ದ್ರಾವಿಡ್ ಅವರ ಎಡಗಾಲಿನಲ್ಲಿ ಗಾಯ ಕಾಣಿಸಿಕೊಂಡಿದೆ.'' ಮುಂದುವರೆದು ಈ ಕುರಿತು ಪೋಸ್ಟ್​ನಲ್ಲಿ "ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವಾಗ ಗಾಯ ಮಾಡಿಕೊಂಡಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಜೈಪುರದಲ್ಲಿ ನಮ್ಮೊಂದಿಗೆ ಸೇರಲಿದ್ದಾರೆ" ಎಂದು ಫ್ರಾಂಚೈಸಿ ಪೋಸ್ಟ್‌ನಲ್ಲಿ ತಿಳಿಸಿದೆ.

ಟೀಮ್ ಇಂಡಿಯಾದೊಂದಿಗೆ ಟಿ20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದ ನಂತರ ಐಪಿಎಲ್ 2025ರ ಹರಾಜಿಗೆ ಮುಂಚಿತವಾಗಿ ದ್ರಾವಿಡ್ ಆರ್‌ಆರ್ ಮುಖ್ಯ ಕೋಚ್ ಆಗಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net