ಆಡಳಿತ ಸೌಧಕ್ಕೆ ಅಧಿಕಾರಿಗಳ ಭೇಟಿ :ವಿಜಯವಾಣಿ ವರದಿಗೆ ಸ್ಪಂದನೆ

sowda
ಗೃಹಮಂಡಳಿ ಇಂಜಿನಿಯರ್ ಸಹನಾ ಮತ್ತು ಸಹಾಯಕ ಇಂಜಿನಿಯರ್ ಹರೀಶ್ ಗುತ್ತಿಗೆದಾರರ ಪ್ರತಿನಿಧಿ ಪ್ರಮೋದ್ ಶೆಟ್ಟಿ ಒಳಗೊಂಡ ಅಧಿಕಾರಿಗಳ ತಂಡ ಮಂಗಳವಾರ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿ ಎಲ್ಲ ಕೊಠಡಿಗಳನ್ನು ಪರಿಶೀಲನೆ ಮಾಡಿದರು
Published on

ಬ್ರಹ್ಮಾವರ: ತಾಲೂಕು ಆಡಳಿತ ಸೌಧ ಪ್ರಥಮ ಮಳೆಗೇ ಸೋರುತ್ತಿದ್ದು, ನೂರಾರು ವರ್ಷದ ಸರ್ಕಾರಿ ಕಡತಗಳು ನಾಶವಾಗುವ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಗೃಹಮಂಡಳಿ ಇಂಜಿನಿಯರ್ ಸಹನಾ ಮತ್ತು ಸಹಾಯಕ ಇಂಜಿನಿಯರ್ ಹರೀಶ್ ಗುತ್ತಿಗೆದಾರರ ಪ್ರತಿನಿಧಿ ಪ್ರಮೋದ್ ಶೆಟ್ಟಿ ಮಂಗಳವಾರ ಸೌಧಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಲೂಕು ಆಡಳಿತ ಸೌಧ ಸೋರುತ್ತಿರುವ ಕುರಿತು ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿದ್ದು, ಇದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಅಧಿಕಾರಿಗಳ ತಂಡ ಬ್ರಹ್ಮಾವರ ತಾಲೂಕು ಕಚೇರಿ, ಸಬ್ ರಿಜಿಸ್ಟರ್ ಕಚೇರಿ, ಸರ್ವೆ ಮತ್ತು ಭೂದಾಖಲೆ, ಶಾಸಕರ ಕಚೇರಿಗಳಿಗೆ ಭೇಟಿ ನೀಡಿದೆ. ಇದೇ ವೇಳೆ ತುರ್ತು ದುರಸ್ತಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net