More

    ಟೀಸರ್ ಮೂಲಕ ಆಗಮಿಸಲು ಸಜ್ಜಾಗಿದ್ದಾನೆ ‘ತ್ರಿವಿಕ್ರಮ’

    ಬೆಂಗಳೂರು: ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಮಗ ವಿಕ್ರಮ್ ರವಿಚಂದ್ರನ್ ಚಿತ್ರರಂಗಕ್ಕೆ ‘ತ್ರಿವಿಕ್ರಮ’ನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣವೂ ಮುಗಿದಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಆಡಿಯೋ ಹಕ್ಕುಗಳ ಮಾರಾಟದ ಮೂಲಕ ಸದ್ದು ಮಾಡಿದ್ದ ತ್ರಿವಿಕ್ರಮ ಸಿನಿಮಾ, ಇದೀಗ ಟೀಸರ್​ ಮೂಲಕ ಸುದ್ದಿ ಮಾಡಲಿದ್ದಾನೆ.

    ಸೋಮಣ್ಣ ನಿರ್ಮಾಣದ, ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ ಮೊದಲ ಟೀಸರ್ ಬಿಡುಗಡೆಗೆ ಸಿದ್ಧನಾಗಿದ್ದಾನೆ. ಆಗಸ್ಟ್ 16ರಂದು ಬೆಳಗ್ಗೆ 11.30ಕ್ಕೆ ಚಿತ್ರದ ಟೀಸರ್ ಬಿಡುಗಡೆ ಆಗಲಿದ್ದು, ಈ ವಿಚಾರವನ್ನು ಸ್ವತಃ ಚಿತ್ರತಂಡ ಘೋಷಿಸಿಕೊಂಡಿದೆ. ಅಂದು ವಿಕ್ರಮ್​ ಅವರ ಹುಟ್ಟುಹಬ್ಬವಾಗಿದ್ದು, ಇನ್ನಷ್ಟು ವಿಶೇಷವಾಗಿದೆ.  ಆಡಿಯೋ ಹಕ್ಕು ಪಡೆದುಕೊಂಡಿರುವ ಎ2 ಮ್ಯೂಸಿಕ್​ ಯೂಟ್ಯೂಬ್​ ಚಾನೆಲ್​ನಲ್ಲಿ ಟೀಸರ್ ಬಿಡುಗಡೆ ಆಗಲಿದೆ.

    ಇದನ್ನೂ ಓದಿ: ಪಾಂಚೋಲಿ ಕೊರಳಿಗೆ ದಿಶಾ ಆತ್ಮಹತ್ಯೆ ಪ್ರಕರಣ!; ದೂರು ದಾಖಲಿಸಿದ ಸೂರಜ್​

    ಇನ್ನು ಆಡಿಯೋ ವಿಚಾರಕ್ಕೆ ಬರುವುದಾದರೆ, ‘ತ್ರಿವಿಕ್ರಮ’ ಚಿತ್ರದ ಹಾಡುಗಳ ಹಕ್ಕುಗಳು 50ಲಕ್ಷಕ್ಕೆ ಮಾರಾಟವಾಗಿದ್ದು, ಇದು ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿದೆ. ಎ2 ಮ್ಯೂಸಿಕ್ ಸಂಸ್ಥೆ ಈ ಹಕ್ಕುಗಳನ್ನು ಪಡೆದುಕೊಂಡಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ.
    ‘ಸದ್ಯಕ್ಕೆ ಕರೊನಾ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಬದಿಗಿಟ್ಟು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಂಡ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಎರಡು ಹಾಡುಗಳನ್ನು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿದ್ದು, ಡಿಸೆಂಬರ್​ನಲ್ಲಿ ಹಾಡುಗಳ ಬಿಡುಗಡೆ ಮಾಡಿ, 2021ಕ್ಕೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.

    ಇದನ್ನೂ ಓದಿ: ‘ಕಂಡ್ಹಿಡಿ ನೋಡೋಣ’ ಎನ್ನುತ್ತಿದ್ದಾರೆ ನಾಗೇಂದ್ರ ಅರಸ್​

    ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಒಟ್ಟು 6 ಹಾಡುಗಳು ಮೂಡಿಬಂದಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಹರಿಚರಣ್, ಶ್ರೇಯಾ ಘೋಶಾಲ್, ಸಿದ್ ಶ್ರೀರಾಮ್ ಮುಂತಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

    ಟೀಸರ್ ಮೂಲಕ ಆಗಮಿಸಲು ಸಜ್ಜಾಗಿದ್ದಾನೆ ‘ತ್ರಿವಿಕ್ರಮ’

    ರಾಧಿಕಾ ಪಂಡಿತ್​ ಫೋಟೋಗೆ ರಮ್ಯಾ ಮಾಡಿದ ಕಮೆಂಟ್​ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts