‘ಕಂಡ್ಹಿಡಿ ನೋಡೋಣ’ ಎನ್ನುತ್ತಿದ್ದಾರೆ ನಾಗೇಂದ್ರ ಅರಸ್​

WhatsApp Image 2020-08-11 at 12.27.29 PM (1)
Published on

ನಾಗೇಂದ್ರ ಅರಸ್ ಸಂಕಲನಕಾರನಾಗಿ ಚಿತ್ರರಂಗಕ್ಕೆ ಕಾಲಿಟ್ಟು ಬಳಿಕ ನಟನಾಗಿ, ನಿರ್ದೇಶಕನಾಗಿ ಹಲವಾರು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗ ‘ಕಂಡ್ಹಿಡಿ ನೋಡೋಣ’ ಅಂತ ಪ್ರೇಕ್ಷಕರ ತಲೆಗೆ ಕೆಲಸ ಕೊಡಲು ಮುಂದಾಗಿದ್ದಾರೆ. ಅಂದರೆ, ಕಂಡ್ಹಿಡಿ ನೋಡೋಣ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಸೈಕೋ ಶಂಕರ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ನವ ನಾಯಕನಟ ಪ್ರಣವ್, ಈಗ "ಕಂಡ್ಹಿಡಿ ನೋಡೋಣ" ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಧ್ಯಮ ವರ್ಗದ ಹುಡುಗನಾಗಿ ಒಂದಷ್ಟು ಬೇರೆಯದೇ ರೀತಿಯ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ವಿನೋದ್ ಜೆ ರಾಜ್ ಛಾಯಾಗ್ರಹಣದಲ್ಲಿ ಬೆಂಗಳೂರಿನ ಸೊಬಗಿನೊಂದಿಗೆ ಚಿತ್ರ ಮೂಡಿಬಂದಿದೆ. ಶ್ರೀಧರ್ ಕಷ್ಯಪ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಚೆನ್ನಾಗಿ ಮೂಡಿ ಬಂದಿದೆ.

ದಿವ್ಯ ಚಂದ್ರಧರ ಮತ್ತು ಯೋಗೇಶ್ ಕೆ. ಗೌಡ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕ, ನಾಗೇಂದ್ರ ಅರಸ್, ವಿಜಯ ಚಂಡೂರ್, ಗಿರಿಜಾ ಲೋಕೇಶ್, ಜಯಸಿಂಹ ಮುಸುರಿ, ಶಿಲ್ಪಾ ಬರಿಕೆ, ಆದರ್ಶ್ ಮುಂತಾದವರಿದ್ದಾರೆ. ಮೊದಲಬಾರಿಗೆ ಈ ಚಿತ್ರದಲ್ಲಿ ತುಂಬಾ ದೊಡ್ಡ ಮಟ್ಟದ ಸೆಟ್ಟನ್ನು ಗ್ರಾಫಿಕ್ ಮೂಲಕ ಸೃಷ್ಠಿಮಾಡಲಾಗಿದೆ.

ಇತ್ತೀಚೆಗೆ ಚಿತ್ರದ ಟೀಸರ್ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಇನ್ನೇನು ಚಿತ್ರಮಂದಿರಗಳು ತೆರೆದರೆ, ಅಲ್ಲಿ ಬಿಡುಗಡೆಗೊಳಿಸಿ ಅದಾದ ಬಳಿಕ ಓಟಿಟಿಯತ್ತ ಆಗಮಿಸುವ ಯೋಜನೆ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net