

ಹಾಸನ: ಕರೊನಾ ವೈರಸ್ ಭೀತಿಗೆ ಜನಸಾಮಾನ್ಯರು ಹೈರಾಣಾಗಿದ್ದರೆ ಕೆಲವು ಮೆಡಿಕಲ್ ಶಾಪ್ಗಳು ಇದೇ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ.
ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಎಮ್ಆರ್ಪಿಗಿಂತ ಅಧಿಕ ಬೆಲೆಗೆ ಮಾರಾಟ ಮಾಡುತ್ತಿವೆ. ಜನರೂ ಅಷ್ಟೇ ಮನೆಯಿಂದ ಆದಷ್ಟು ಮಾಸ್ಕ್ ಧರಿಸಿಕೊಂಡೇ ಹೋಗುತ್ತಿದ್ದು, ಅದನ್ನು ಕೊಳ್ಳಲು ಮೆಡಿಕಲ್ ಶಾಪ್ಗಳಿಗೆ ತೆರಳುತ್ತಿದ್ದಾರೆ.
ಕರೊನಾ ಭಯವನ್ನೇ ಅಸ್ತ್ರ ಮಾಡಿಕೊಂಡು ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಹಾಸನ್ ಮೂರು ಔಷಧಿ ಅಂಗಡಿಗಳ ಮೇಲೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೂರು ಮೆಡಿಕಲ್ ಶಾಪ್ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 20 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)