More

    ಹಲಗೇರಿಯಲ್ಲಿ ನಡೆದ ನಾಡೋಜ ಪಾಟೀಲ ಪುಟ್ಟಪ್ಪ ಅಂತ್ಯಕ್ರಿಯೆ; ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರಿಗೆ ಸ್ಕ್ರೀನಿಂಗ್​ ತಪಾಸಣೆ

    ಹಾವೇರಿ: ಅನಾರೋಗ್ಯದಿಂದ ನಿನ್ನೆ (ಮಾ.16) ನಿಧನರಾದ ನಾಡೋಜ ಪಾಟೀಲ ಪುಟ್ಟಪ್ಪನವರ ಅಂತ್ಯಸಂಸ್ಕಾರ ಇಂದು ಅವರ ಸ್ವಗ್ರಾಮವಾದ ರಾಣೆಬೆನ್ನೂರಿನ ಹಲಗೇರಿಯ ಅಡಕೆ ತೋಟದಲ್ಲಿ ನಡೆಯಿತು.

    ಸಕಲ ಸರ್ಕಾರಿ ಗೌರವವೊಂದಿಗೆ, ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳು ನಡೆದವು. ಈ ವೇಳೆ ತರಳಬಾಳು ಜಗದ್ಗುರು ಬೃಹನ್ಮಠ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಂಬಳ ಮಠದ ನಿಜಗುಣಾನಂದ ಸ್ವಾಮೀಜಿ, ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಮಂತ್ರಪಠಿಸಿದರು.

    ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಮಾಜಿ ಸಚಿವ ಎಚ್.ಕೆ.ಪಾಟೀಲ, ಶಾಸಕ ಅರುಣಕುಮಾರ ಪೂಜಾರ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು ಬಿ ಬಣಕಾರ, ಜಿಲ್ಲಾಧಿಕಾರಿ ಕೃಷ್ಣ ಭಾಜಪೈ, ತಹಸೀಲ್ದಾರ ಬಸನಗೌಡ ಸೇರಿ ಅನೇಕರು ಪಾಲ್ಗೊಂಡಿದ್ದರು.

    ಅಂತ್ಯಸಂಸ್ಕಾರಕ್ಕೂ ಕರೊನಾ ಭೀತಿ

    ಡಾ. ಪಾಟೀಲ ಪುಟ್ಟಪ್ಪ ಅವರ ಅಂತ್ಯಸಂಸ್ಕಾರಕ್ಕೂ ಕರೊನಾ ಭೀತಿ ತಟ್ಟಿತ್ತು. ಅದರಲ್ಲಿ ಪಾಲ್ಗೊಳ್ಳುವರನ್ನು ಸ್ಕ್ರೀನಿಂಗ್​ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳದಲ್ಲಿದ್ದ ರಾಣೆಬೆನ್ನೂರು ತಾಲೂಕು ಆಸ್ಪತ್ರೆ ಸಿಬ್ಬಂದಿ ಎಲ್ಲರನ್ನೂ ಪರಿಶೀಲಿಸಿಯೇ ಬಿಡುತ್ತಿದ್ದರು.

    ಯುವ ಕಾಂಗ್ರೆಸ್ ಮುಖಂಡರ ಹೊಡೆದಾಟ; ಕ್ಷೇತ್ರ ಪ್ರಧಾನ ಕಾರ್ಯದರ್ಶಿಗೆ ಹಲ್ಲೆ, ನಾಲ್ವರ ವಿರುದ್ಧ ಮೊಕದ್ದಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts