More

    ಅಮೆರಿಕದಲ್ಲಿ ಮೃತ ಇಂಜಿನಿಯರ್ ಕುಟುಂಬದ ಮೂವರ ಅಂತ್ಯಕ್ರಿಯೆ

    ದಾವಣಗೆರೆ: ಅಮೆರಿಕದಲ್ಲಿ ಇತ್ತೀಚೆಗೆ ಮೃತರಾಗಿದ್ದ ದಾವಣಗೆರೆ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಕುಟುಂಬದ ಮೂವರ ಮೃತದೇಹಗಳ ಅಂತ್ಯಕ್ರಿಯೆಯನ್ನು ಶನಿವಾರ ಬಾಲ್ಟಿಮೋರ್‌ನಲ್ಲಿ ನೆರವೇರಿಸಲಾಯಿತು.

    ಭಾರತೀಯ ಕಾಲಮಾನದಂತೆ ಶನಿವಾರ ರಾತ್ರಿ 11.30ಕ್ಕೆ ಮೃತ ಯೋಗೇಶ್ ಹಾಗೂ ಪ್ರತಿಭಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶವಸಂಸ್ಕಾರ ನಡೆಸಲಾಗಿದೆ.
    ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಶವಗಳನ್ನು ಭಾರತಕ್ಕೆ ಕೊಂಡೊಯ್ಯುವ ಸ್ಥಿತಿಯಲ್ಲಿ ಇಲ್ಲ ಎಂದು ಬಾಲ್ಟಿಮೋರ್ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದ ಹಿನ್ನೆಲೆ ಅಲ್ಲಿಯೇ ಶವಸಂಸ್ಕಾರ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದರು.
    ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್ ಹಾಗೂ ಪ್ರತಿಭಾಳ ತಾಯಿ ಪ್ರೇಮಾ, ಸಹೋದರ ಗಣೇಶ ಅಮೆರಿಕಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
    ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಮೂಲದ ಯೋಗೇಶ್ ಪತ್ನಿ, ಪುತ್ರನನ್ನು ಶೂಟ್ ಮಾಡಿ ಬಳಿಕ ಗುಂಡು ಹಾರಿಸಿಕೊಂಡಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ಬಹಿರಂಗಗೊಂಡಿದ್ದು ಬಾಲ್ಟಿಮೋರ್ ಪೊಲೀಸರಿಂದ ತನಿಖೆ ಮುಂದುವರಿದಿದೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts