

ಬರೇಲಿ: ಎರಡು ವಾರದೊಳಗೆ ನನ್ನನ್ನು ಹೊಡೆದು ಹಾಕುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಸಿದ್ದಾರೆ. ಈ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಹಾಗೂ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ(CJI)ಗೆ ಪತ್ರ ಬರೆಯಲಾಗುವುದು ಎಂದು ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗ್ಯಾಂಗ್ಸ್ಟಾರ್ ಅತೀಕ್ ಅಹ್ಮದ್ ಸಹೋದರ ಖಲೀದ್ ಆಶ್ರಫ್ ಹೇಳಿದ್ದಾರೆ.
ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಮಂಗಳವಾರ ಪ್ರಯಾಗ್ರಾಜ್ ನ್ಯಾಯಾಲಯವು ಆಶ್ರಫ್ ಸೇರಿದಂತೆ ಇತರೆ ಆರು ಮಂದಿಯನ್ನು ಪ್ರಕಣದಿಂದ ಖುಲಾಸೆ ಮಾಡಿದ ನಂತರ ಪೊಲೀಸ್ ಅಧಿಕಾರಿ ಒಬ್ಬರು ನನ್ನ ಬಳಿ ಬಂದು ನಿನ್ನನು ಎರಡು ವಾರಗಳಲ್ಲಿ ಹೊಡೆದು ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಆ ಅಧಿಕಾರಿಯ ಹೆಸರನ್ನು ಯುಪಿ ಸಿಎಂ ಹಾಗೂ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಎನ್ವಲಪ್ನಲ್ಲಿ ಕಳಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ತನ್ನಗೆ ನ್ಯಾಯಾಂಗದಲ್ಲಿ ನಂಬಿಕೆ ಇದ್ದು ಬೇರೆ ಪ್ರಕರಣಗಳಲ್ಲಿ ದೋಷಮುಕ್ತನಾಗುತ್ತೇನೆ ಎಂಬ ವಿಶ್ವಾಸವಿದೆ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ತಾನು ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ತೋರಿಸಿರುವುದು ಸಂಪೂರ್ಣ ಆಧಾರರಹಿತ. ನನ್ನ ಕುಟುಂದವರನ್ನು ಸಿಲುಕಿಸಲು ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಮೇಲಿರುವ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವುದಕ್ಕೆ ಅನುಮತಿ ನೀಡಿರುವ ಸಮಯದಲ್ಲಿ ನಮ್ಮನ್ನು ಜೈಲಿನಿಂದ ಹೊರಗಡೆ ಏಕೆ ಕರೆದುಕೊಂಡು ಬರಲಾಗುತ್ತಿದೆ. ನಾವು ಜೈಲಿನಿಂದ ಹೊರ ಬಂದ ಸಮಯದಲ್ಲಿ ನಮ್ಮ ಜೊತೆ ವಕೀಲರು ಇರಬೇಕು. ಆದರೆ, ಪೊಲೀಸ್ ಅಧಿಕಾರಿಗಳನ್ನು ಬಿಟ್ಟರೆ ಬೇರೆ ಯಾರು ನಮ್ಮೊಂದಿಗೆ ಇರುವುದಿಲ್ಲ ಎಂದು ಅತೀಕ್ ಅಹ್ಮದ್ ಸಹೋದರ ಅಶ್ರಫ್ ದೂರಿದ್ದಾರೆ.