19 ವರ್ಷದ ನಂತರ ಮರಳಿ ಬಂದ ಪತ್ನಿ ಜತೆ ಮತ್ತೆ ಮದುವೆಯಾದ ಪತಿ; ಅಸಲಿ ಕಥೆ ಇಂತಿದೆ...

odisha couple
Published on

ಒಡಿಶಾ : ಪತಿಯೊಬ್ಬ 19 ವರ್ಷಗಳ ನಂತರ ಮತ್ತೆ ತನ್ನ ಹೆಂಡತಿಯನ್ನು ಮದುವೆಯಾಗಿದ್ದಾನೆ. ಅವನು ಅದೇ ಹೆಂಡತಿಯನ್ನು ಏಕೆ ಮರುಮದುವೆಯಾದನು? ಎನ್ನುವ ಪ್ರಶ್ನೆ ಎಲ್ಲರಿಗೂ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ...

ಒಡಿಶಾದ ಕಟಕ್ ಜಿಲ್ಲೆಯ ಭಬ್‌ಚಂದ್‌ಪುರ ಗ್ರಾಮದಲ್ಲಿ ಬಸಂತ್ ಪರಿದಾ ಎನ್ನುವ ವ್ಯಕ್ತಿ ಊರ್ಮಿಳಾ ಪರಿದಾಪತಿ ಮತ್ತು ಪತ್ನಿ ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಅವರ ಜೀವನ ಸುಖಮಯವಾಗಿ ಯಾವುದೇ ತೊಂದರೆಗಳಿಲ್ಲದೆ ಆರಾಮವಾಗಿ ಸಾಗುತ್ತಿತ್ತು. ಆದರೆ ಇವರ ಜೀವನದಲ್ಲಿ ನಡೆದ ಒಂದು ಘನಟೆ ಇಡಿ ಜೀವನವನ್ನೇ ಬದಲಿಸಿದೆ.

2004ರಲ್ಲಿ ಸೋದರಳಿಯ ಮನೆಗೆ ಹೋಗಲು ಹೊರಟ ಊರ್ಮಿಳಾಗೆ ಅದೇನಾಯ್ತೋ ಗೊತ್ತಿಲ್ಲ. ಆಕೆ ಮನೆಯ ದಾರಿಯನ್ನು ಮರೆತಿದ್ದಳು. ಬಸಂತ್ ಪರಿದಾ ತನ್ನ ಪತ್ನಿಗಾಗಿ ಹಲವು ಕಡೆ ಹುಡುಕಾಡಿದ್ದಾನೆ. ಆದರೆ ಸಿಕ್ಕಿಲ್ಲ. ಊರ್ಮಿಳಾ ಮನೆ ಬಿಟ್ಟು 19 ವರ್ಷಗಳು ಕಳೆದಿವೆ. ಆದರೆ ಪರಿದಾ ಅವರ ಪತ್ನಿ ಬರುತ್ತಾರೆ ಎಂಬ ವಿಶ್ವಾಸ ಬಸಂತ್ ಅವರಲ್ಲಿತ್ತು. ಆದ್ದರಿಂದ ಅವನು ಅವಳನ್ನು ಹುಡುಕುತ್ತಲೇ ಇದ್ದನು. ಆದರೆ ಯಾವುದೇ ಫಲ ಸಿಗಲಿಲ್ಲ.

ತಿಗಿರಾ ಪಟ್ಟಣದ ಎಟಿಎಂನಲ್ಲಿ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿದ್ದ ಊರ್ಮಿಳಾ ಅವರನ್ನು ನೋಡಿ ವಿಡಿಯೋ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ 19 ವರ್ಷಗಳ ನಂತರ ಊರ್ಮಿಳಾ ಪತ್ತೆಯಾಗಿದ್ದಾರೆ. ವಿಡಿಯೋ ನೋಡಿದ ಜಿಲ್ಲಾಧಿಕಾರಿ ಆಕೆಯನ್ನು ಶ್ರೀ ಮಂದಿರ ಸೇವಾಶ್ರಮಕ್ಕೆ ಸೇರಿಸಿದ್ದಾರೆ. ಆಕೆಗೆ ಅಲ್ಲಿ ಚಿಕಿತ್ಸೆ ನೀಡಲಾಯಿತು. ಸುಮಾರು ಎರಡು ತಿಂಗಳ ಚಿಕಿತ್ಸೆಯ ನಂತರ ಊರ್ಮಿಳಾ ಚೇತರಿಸಿಕೊಂಡರು. ಹಿಂದಿನದು ನೆನಪಾಗುತ್ತದೆ. ಅವಳು ತನ್ನ ಗಂಡ ಮತ್ತು ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿದ್ದಳು.

ಕಳೆದ ಸೋಮವಾರ ( 2023 ಜುಲೈ3) ಮನೆಗೆ ಮರಳಿದರು. ಮಕ್ಕಳು ಬೆಳೆದಿದ್ದಾರೆ. ಅವರನ್ನು ನೋಡಿ ಊರ್ಮಿಳಾ ಅನುಭವಿಸಿದ ಆನಂದ ಅಷ್ಟಿಷ್ಟಲ್ಲ. ಮತ್ತು ಅವಳು ತನ್ನ ಗಂಡನನ್ನು ನೋಡಿ ಕಣ್ಣೀರು ಹಾಕಿದಳು. ಬಸಂತ್ ತನ್ನ ಹೆಂಡತಿಯನ್ನು ಮನೆಗೆ ಕರೆತಂದನು. ಊರ್ಮಿಳಾಳ ಹಣೆಗೆ ಬೊಟ್ಟು ಇಟ್ಟು, ಮಾಲೆ ಹಾಕಿ ಮತ್ತೆ ಮದುವೆ ಆಗುವ ಮೂಲಲಕವಾಗಿ ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net