ಲೈಂಗಿಕ ದೌರ್ಜನ್ಯ, ಕೊಲೆ ಆರೋಪಿಯ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ!

Demolition drive continues at rape murder accuseds home in UP
Published on

ಫತೇಪುರ್:  19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಆರೋಪ ಹೊತ್ತಿರುವ ಸೋನು ಅಲಿಯಾಸ್ ಸಿಕಂದರ್ ಮನೆಯನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಧ್ವಂಸಗೊಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಅತ್ಯಾಚಾರ ಘಟನೆ ಜೂನ್ 22 ರಂದು ಸಂಭವಿಸಿದೆ. ಸಂತ್ರಸ್ತೆ ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆರೋಪಿ ಸೋನುನನ್ನು ಬಂಧಿಸಿ ಕಸ್ಟಡಿಗೆ ಕಳುಹಿಸಲಾಗಿದೆ. 

ಫತೇಪುರ್ ಜಿಲ್ಲೆಯಲ್ಲಿ ಜೂನ್ 27 ರಂದು ಸೋನು ಮನೆ ಕೆಡವುವಿಕೆಯ ಮೊದಲ ಹಂತವನ್ನು ಅಧಿಕಾರಿಗಳು ನಡೆಸಿದ್ದರು. ಧ್ವಂಸ ಮಾಡುವಾಗ ಪೊಲೀಸರು ಮತ್ತು ನಾಗರಿಕ ಆಡಳಿತ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರು. ದೃಶ್ಯಾವಳಿಗಳಲ್ಲಿ ಬುಲ್ಡೋಜರ್‌ಗಳು ಆರೋಪಿಯ ಮನೆಯನ್ನು ಸಂಪೂರ್ಣವಾಗಿ ಕೆಡವಿರುವುದನ್ನು ಕಾಣಬಹುದು.

ವರದಿಗಳ ಪ್ರಕಾರ, ಜೂನ್ 22 ರಂದು ರಾಧಾನಗರ ಪ್ರದೇಶದ ಹಳ್ಳಿಯೊಂದರ 19 ವರ್ಷದ ಹುಡುಗಿ ತನ್ನ ಕುಟುಂಬದೊಂದಿಗೆ ತನ್ನ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ಬಿಂಡ್ಕಿ ಕೊಟ್ವಾಲಿಗೆ ಬರುತ್ತಿದ್ದರು. ಆರೋಪಿ ಮತ್ತು ಜ್ವಾಲಗಂಜ್ ನಿವಾಸಿ ಸಿಕಂದರ್ ಖಾನ್ ಅಲ್ಲಿಗೆ ಆಗಮಿಸಿ, ಬಾಲಕಿಯನ್ನು ಅಪಹರಿಸಿ 500 ಮೀಟರ್ ದೂರದಲ್ಲಿದ್ದ ಮನೆಗೆ ಕರೆದೊಯ್ದು, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ಮೇಲಿನಿಂದ ತಳ್ಳಿದ್ದಾನೆ.

ಜೂನ್ 23 ರಂದು ಮುಂಜಾನೆ, ಫರೀದ್‌ಪುರದಲ್ಲಿ ಇನ್ನೂ ನಿರ್ಮಿಸಲಾಗುತ್ತಿರುವ ಮನೆಯಲ್ಲಿ ಬಾಲಕಿಯನ್ನು ಪತ್ತೆ ಮಾಡಲಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಕಾನ್ಪುರ ಹಾಲೆಟ್ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ (ICU) ಗೆ ದಾಖಲಿಸಲಾಯಿತು ಆದರೆ ಆಕೆ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net