ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿತ: ಅಂಗಲಾಚಿ ಬೇಡಿಕೊಂಡರೂ ಬಿಡದ ಗ್ರಾಮಸ್ಥರು..!

Woman Odisha
Published on

ಕೇಂದ್ರಪರ: ನೆರೆಮನೆಯವರ ಜತೆಗಿನ ವಿವಾದದ ಬೆನ್ನಲ್ಲೇ ಕೆಲ ಗ್ರಾಮಸ್ಥರು ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಮೃಗೀಯವಾಗಿ ಥಳಿಸಿರುವ ಘಟನೆ ಕೇದ್ರಾಪರ ಜಿಲ್ಲೆಯ ನಿಕಿರ ಪೊಲೀಸ್​ ಠಾಣಾ ವ್ಯಾಪ್ತಿಯ ಕೊರಾ ಗ್ರಾಮದಲ್ಲಿ ನಡೆದಿದ್ದು, ಗ್ರಾಮದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ.

ಅನಾಗರಿಕರಂತೆ ಮಹಿಳೆ ಮೇಲೆ ಗ್ರಾಮಸ್ಥರು ದಾಳಿ ಮಾಡಿರುವ ದೃಶ್ಯವನ್ನು ಕೆಲ ಗ್ರಾಮಸ್ಥರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಕೆಲವರು ಮಹಿಳೆಯನ್ನು ಎಳೆದಾಡಿ ಕರುಣೆ ಇಲ್ಲದೆ ಒದಿಯುವುದು, ಅನೇಕ ಬಾರಿ ಪಂಚ್ ಮಾಡುವುದು ಮತ್ತು ಬಿದಿರಿನಿಂದ ಥಳಿಸುವುದು ದಾಖಲಾಗಿದೆ.

ನೆರೆಮನೆಯವರು ಮತ್ತು ಸಂತ್ರಸ್ತೆಯ ಕುಟುಂಬ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಇದೇ ವಿಚಾರವಾಗಿ ಎರಡು ಬಣಗಳ ನಡುವೆ ವಾಗ್ವಾದ ಶುರುವಾಗಿತ್ತು. ಬಳಿಕ ಇದು ತಾರಕಕ್ಕೇರಿ ತಾಳ್ಮೆ ಕಳೆದುಕೊಂಡು ಕೆಲ ಗ್ರಾಮಸ್ಥರು ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ್ದಾರೆ. ಮಹಿಳೆ ಸಹಾಯಕ್ಕಾಗಿ ಅಂಗಲಾಚಿ ಕೂಗಿದರು ಯಾರೋಬ್ಬರು ಸಹ ಮುಂದೆ ಬರದೇ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು.

ಇದೀಗ ಎರಡು ಬಣಗಳು ಪ್ರತ್ಯೇಕವಾಗಿ ತಮ್ಮ ದೂರುಗಳನ್ನು ದಾಖಲಿಸಿವೆ. ಅಲ್ಲದೆ, ಮಹಿಳೆ ಮೇಲಿನ ಹಲ್ಲೆ ಸಂಬಂಧವು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net