

ಭುವನೇಶ್ವರ್: ಯಾಸ್ ಚಂಡಮಾರುತದಿಂದ ಒಡಿಶಾದಲ್ಲಿ ಉಂಟಾಗಿರುವ ಪರಿಣಾಮ ಕುರಿತು ನ್ಯೂಸ್ ರಿಪೋರ್ಟರ್ ಒಬ್ಬರು ವರದಿ ಮಾಡುವ ಪ್ರಯತ್ನದ ವೇಳೆ ಹಾಸ್ಯ ಪ್ರಸಂಗವೊಂದು ಜರುಗಿದೆ.
ಒಡಿಶಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗುತ್ತಿದ್ದು, ಯಾಸ್ ಚಂಡಮಾರುತ ಭೀಕರ ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಈ ಬಗ್ಗೆ ಪ್ರತ್ಯಕ್ಷ ವರದಿ ಮಾಡಲು ನಕ್ಷತ್ರ ನ್ಯೂಸ್ ರಿಪೋರ್ಟರ್ ಫೀಲ್ಡಿಗೆ ಇಳಿದಿದ್ದರು. ಚಂಡಮಾರುತ ಸಂದರ್ಭದಲ್ಲಿ ಹೊರಗ್ಯಾಕೆ ಬಂದಿದ್ದೀರಿ? ಎಂಬ ಆ್ಯಂಕರ್ ಪ್ರಶ್ನೆಗೆ ಕಾಮನ್ ಮ್ಯಾನ್ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾಸ್ ಚಂಡಮಾರುತದಿಂದ ಬಿರುಗಾಳಿಯೇ ಸೃಷ್ಟಿಯಾಗಿದ್ದು, ನೀವೇಕೆ ಮನೆಯಿಂದ ಹೊರಗೆ ಬಂದಿದ್ದೀರಾ? ಎಂದು ವರದಿಗಾರ ಕಾಮನ್ ಮ್ಯಾನ್ ಒಬ್ಬರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾಮನ್ ಮ್ಯಾನ್, ನೀವು ಹೊರಗೆ ಬಂದಿರುವುದರಿಂದ ನಾವು ಸಹ ಬಂದಿದ್ದೇವೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಯಾಗಿ ನಾವು ನ್ಯೂಸ್ ಕವರೇಜ್ ಮಾಡಲು ಬಂದಿದ್ದೇವೆ ಎಂದು ಆ್ಯಂಕರ್ ಹೇಳಿದರು. ನಾವು ಹೊರಗಡೆ ಬರದಿದ್ದರೆ ನೀವು ಯಾರನ್ನು ತೋರಿಸುತ್ತಿರಾ ಎಂಬ ಕಾಮನ್ ಮ್ಯಾನ್ ಪ್ರತಿಕ್ರಿಯೆಗೆ ಏನು ಉತ್ತರಿಸಬೇಕೆಂದು ತಿಳಿಯದೇ ಆ್ಯಂಕರ್ ತಬ್ಬಿಬ್ಬರಾದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ನಕ್ಷತ್ರ ನ್ಯೂಸ್ ತನ್ನ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಮನ್ ಮ್ಯಾನ್ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದು, ಲೈಕ್ಸ್ಗಳ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್)