‘ನಡು ರಸ್ತೆಯಲ್ಲಿ ಕಂಗನಾಳನ್ನು ಅತ್ಯಾಚಾರ ಮಾಡಬೇಕು’ ಎಂದ ವಕೀಲ; ಮುಂದೆ ನಡೆದಿದ್ದೇ ಬೇರೆ!!

kangana-2
Published on

ಒಡಿಶಾ: ಬಾಲಿವುಡ್​ನಲ್ಲಿ ಕಂಗನಾ ರಣಾವತ್​ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಡ್ರಗ್ಸ್ ಮಾಫಿಯಾ ಸೇರಿ ಹಲವು ಘಟನಾವಳಿಗಳಿಗೆ ಸಂಬಂಧಿಸಿದಂತೆ ಕಂಗನಾ ನೀಡಿರುವ ಹೇಳಿಕೆಗಳು ಪರ ವಿರೋಧ ಚರ್ಚೆಗೆ ಕಾರಣವಾಗುತ್ತಿವೆ. ಹೀಗಿರುವಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ನವರಾತ್ರಿ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದ ಕಂಗನಾ, ಯಾರೆಲ್ಲ ನವರಾತ್ರಿ ಪ್ರಯುಕ್ತ ಉಪವಾಸ ಮಾಡುತ್ತಿದ್ದೀರಿ. ನಾನೂ ಸಹ ಉಪವಾಸ ಮಾಡುತ್ತಿದ್ದೇನೆ. ಇನ್ನೊಂದು ವಿಶೇಷ ಏನೆಂದರೆ, ನನ್ನ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ’ ಎಂದಿದ್ದರು.

ಆ ಫೋಟೋಕ್ಕೆ ಓಡಿಶಾದ ವಕೀಲ ಮೆಹೆಂದಿ ರೆಜಾ ಎಂಬುವವರು ‘ನಡು ರಸ್ತೆಯಲ್ಲಿ ನಿನ್ನನ್ನು ಅತ್ಯಾಚಾರ ಮಾಡಬೇಕು’ ಎಂದು ಕಮೆಂಟ್​ ಹಾಕಿದ್ದರು. ಬಳಿಕ ಆ ಕಮೆಂಟ್​ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗುತ್ತಿದ್ದಂತೆ ಸ್ವತಃ ಮೆಹೆಂದಿ ರೆಜಾ ಪ್ರತಿಕ್ರಿಯಿಸಿದ್ದಾರೆ. ಫೇಸ್​ಬುಕ್​ ಖಾತೆಯ ಎಡವಟ್ಟಿನಿಂದ ಈ ಘಟನೆ ನಡೆದಿದೆ ಎಂದಿದ್ದಾರೆ.

‘ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿದೆ. ಆ ಖಾತೆ ಮೂಲಕ ಯಾರೋ ಕಂಗನಾ ಬಗ್ಗೆ ತುಚ್ಯವಾಗಿ ಕಮೆಂಟ್​ ಮಾಡಿದ್ದಾರೆ. ಮಹಿಳೆಯರ ದೃಷ್ಟಿಯಲ್ಲಿ ನನ್ನ ನಿಲುವುಗಳೇ ಬೇರೆ. ನನಗೂ ಇದನ್ನು ನೋಡಿ ಶಾಕ್​ ಆಯ್ತು. ಕೂಡಲೇ ಕ್ಷಮೆಯಾಚಿಸಿದ್ದೇನೆ. ಇದರಿಂದ ಯಾರ ಭಾವನೆಗಳಿಗೆ ಧಕ್ಕೆ ಆಗಿದ್ದರೆ, ದಯಮಾಡಿ ನನ್ನನ್ನು ಕ್ಷಮಿಸಿ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net