More

    IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

    ಬೆಂಗಳೂರು: ಮಾರ್ಚ್ 22 ರಿಂದ ಆರಂಭಗೊಳ್ಳಲಿರುವ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಐಪಿಎಲ್ ಟೂರ್ನಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಭಾರೀ ಹಿನ್ನಡೆ ಅನುಭವಿಸಿದೆ. ನ್ಯೂಜಿಲೆಂಡ್‌ನ ಸ್ಟಾರ್ ಕ್ರಿಕೆಟಿಗ ಡೆವೊನ್ ಕಾನ್ವೇ ಐಪಿಎಲ್ 17ನೇ ಆವೃತ್ತಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

    ಇದನ್ನೂ ಓದಿ:ಹಿಮಾಚಲದಲ್ಲಿ ಕಾಂಗ್ರೆಸ್​ ಶಾಸಕರಿಂದ ಅಡ್ಡಮತದಾನ ಮಾಡಿದ್ದೇಕೆ? ಅಸಲಿ ಕಾರಣ ಹೇಳಿದ ಕೇಂದ್ರ ಸಚಿವ ಅನುರಾಗ್​! 

    ಬ್ಲ್ಯಾಕ್ ಕ್ಯಾಪ್ಸ್ ಆರಂಭಿಕ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆ ಹೆಬ್ಬೆರಳಿನ ಗಾಯದಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಆಟದ ಮುನ್ನಾದಿನದಂದು ಬುಧವಾರ ತಿಳಿಸಿದೆ.

    ಆಕ್ಲೆಂಡ್‌ನಲ್ಲಿ ಕಳೆದ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಸೋಲಿನಲ್ಲಿ ಹೆಬ್ಬೆರಳು ನೋಯಿಸಿದ ನಂತರ ಕಾನ್ವೇ ಗುರುವಾರ ವೆಲ್ಲಿಂಗ್‌ಟನ್‌ನಲ್ಲಿ ಪ್ರಾರಂಭವಾಗುವ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ನ್ಯೂಜಿಲೆಂಡ್ ಟಿ20 ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡಿತು. ಟಿ20 ಸರಣಿಯ ವೇಳೆ ಕಾನ್ವೇ ಗಾಯಗೊಂಡಿದ್ದು, ಗಾಯ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.

    ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಟೆಸ್ಟ್ ಸರಣಿಗೆ ಕಾನ್ವೆ ಅವರ ಬದಲಿ ಆಟಗಾರನನ್ನು ಘೋಷಿಸಿದೆ. ಬದಲಿ ಆಟಗಾರನಾಗಿ ಹೆನ್ರಿ ನಿಕೋಲ್ಸ್‌’ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಗಾಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್’ಗೆ ಸಂಕಷ್ಟ ಹೆಚ್ಚುವುದು ಖಚಿತ ಎನ್ನಲಾಗಿದೆ.

    ನ್ಯೂಜಿಲೆಂಡ್‌ ಕೋಚ್ ಮಾಹಿತಿ ನೀಡಿರುವಂತೆ, ಪ್ರಮುಖ ಪಂದ್ಯವೊಂದರ ಮೊದಲು ಡೆವೊನ್ ಗಾಯಗೊಂಡಿರುವುದು ನಮಗೆ ದೊಡ್ಡ ಹೊಡೆತ ನೀಡಿದಂತಿದೆ. ಅಗ್ರ ಕ್ರಮಾಂಕದಲ್ಲಿ ಕಾನ್ವೇಯನ್ನು ಮಿಸ್ ಮಾಡಿಕೊಳ್ಳಲಿದ್ದೇಚೆ. ಈ ಸರಣಿಗೂ ಮುನ್ನ ಕಾನ್ವೇ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಅವರು ಗಾಯಗೊಂಡಿದ್ದಾರೆ ಎಂದಿದ್ದಾರೆ.

    ಡೆವೊನ್ ಕಾನ್ವೇ ನಮಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕ್ಲಾಸ್ ಆಟಗಾರ ಮತ್ತು ಅವರು ಈ ಸರಣಿಯನ್ನು ನಿಜವಾಗಿಯೂ ಎದುರು ನೋಡುತ್ತಿದ್ದಾರೆಂದು ನನಗೆ ತಿಳಿದಿದೆ ಎಂದು ಕೋಚ್​ ಹೇಳಿದ್ದಾರೆ. ಕಳೆದ ವರ್ಷ ಎಂಎಸ್‌‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಕಾನ್ವೇ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಸೀಸನ್’ನಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದ ಕಾನ್ವೆ, ಈ ಬಾರಿ ಆಡುವುದು ಅನುಮಾನ ಎಂದು ವರದಿಯಾಗಿದೆ.

     

    ಕಾಶ್ಮೀರಕ್ಕೆ ಸಚಿನ್ ಕುಟುಂಬ ಭೇಟಿ: ಯುವಕರಿಗೆ ಮಹತ್ವದ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts