More

    ಕಾಶ್ಮೀರಕ್ಕೆ ಸಚಿನ್ ಕುಟುಂಬ ಭೇಟಿ: ಯುವಕರಿಗೆ ಮಹತ್ವದ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ಹೊಗಳಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ:ಕಾವಲಯ್ಯ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಆನೆ! ಇದರಲ್ಲಿದೆ ಟ್ಟಿಸ್ಟ್​, ವಿಡಿಯೋ ವೈರಲ್!

    ಇದು ನೋಡಲು ಅದ್ಭುತವಾಗಿದೆ! ಸಚಿನ್ ತೆಂಡೂಲ್ಕರ್ ಅವರ ಸುಂದರವಾದ ಜಮ್ಮು ಮತ್ತು ಕಾಶ್ಮೀರ ಭೇಟಿಯು ನಮ್ಮ ಯುವಕರಿಗೆ ಎರಡು ಪ್ರಮುಖ ಸಂದೇಶ ನೀಡುತ್ತಿದೆ. ಇನ್‌ಕ್ರೆಡಿಬಲ್‌ ಇಂಡಿಯಾದ ವಿವಿಧ ಭಾಗಗಳನ್ನು ಅನ್ವೇಷಿಸಲು. ಹಾಗೂ “ಮೇಕ್ ಇನ್ ಇಂಡಿಯಾ” ಪ್ರಾಮುಖ್ಯತೆ. ಒಟ್ಟಾಗಿ, ವಿಕಸಿತ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸೋಣ ಎಂದು ಮೋದಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ, ಪುತ್ರಿ ಸಾರಾ ಜತೆ ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಅವರು ಇಲ್ಲಿನ ಹಳ್ಳಿಯೊಂದ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಕ್ರಿಕೆಟ್​ ಆಡಿದ್ದಾರೆ.

    ಈ ವೇಳೆ ಇಲ್ಲಿನ ಸ್ಥಳೀಯ ಮನೆಗಳಿಗೂ ಭೇಟಿ ನೀಡಿ ಚಹಾ ಸೇವಿಸಿದ್ದರು. ಸ್ಥಳೀಯ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಸಚಿನ್​, ಈ ವೇಳೆ ತಮ್ಮ ಸಹೋದರಿ ಉಡುಗೊರೆಯಾಗಿ ನೀಡಿದ ತಮ್ಮ ಮೊದಲ ಕಾಶ್ಮೀರ ವಿಲ್ಲೋ ಬ್ಯಾಟ್ ಅನ್ನು ನೆನಪಿಸಿಕೊಂಡರು. ಈ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು. ಇದೀಗ ಕ್ರಿಕೆಟ್​ ಆಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ತೆಂಡೂಲ್ಕರ್, ಜಮ್ಮು ಮತ್ತು ಕಾಶ್ಮೀರವು ನನ್ನ ನೆನಪಿನಲ್ಲಿ ಒಂದು ಸುಂದರ ಅನುಭವವಾಗಿ ಉಳಿಯುತ್ತದೆ. ಸುತ್ತಲೂ ಹಿಮವಿತ್ತು ಆದರೆ ಜನರ ಅಸಾಧಾರಣ ಆತಿಥ್ಯದಿಂದಾಗಿ ನಾವು ಬೆಚ್ಚಗಿದ್ದೇವೆ ಎಂದು ಬರೆದುಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಭಾವನೆಗಳನ್ನು ಉಲ್ಲೇಖಿಸಿರುವ ಸಚಿನ್, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಅವರು ನಮ್ಮ ದೇಶದಲ್ಲಿ ನೋಡಲು ತುಂಬಾ ಇದೆ ಎಂದು ಹೇಳಿದರು. ವಿಶೇಷವಾಗಿ ಈ ಪ್ರವಾಸದ ನಂತರ ಹೆಚ್ಚು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.

    ಮೇಕ್-ಇನ್-ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ಗೆ ಉತ್ತಮ ಉದಾಹರಣೆಗಳಾಗಿವೆ. ಅವರು ಜಗತ್ತಿನಾದ್ಯಂತ ಪ್ರಯಾಣಿಸಿದ್ದಾರೆ, ಮತ್ತು ಈಗ ನಾನು ಜಗತ್ತಿನಾದ್ಯಂತ ಮತ್ತು ಭಾರತದಾದ್ಯಂತದ ಜನರನ್ನು ಇನ್‌ಕ್ರೆಡಿಬಲ್‌ ಇಂಡಿಯಾದ ಹಲವಾರು ಅದ್ಭುತ ಸ್ಥಳಗಳಲ್ಲಿ ಒಂದಾದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತಿಯೊಬ್ಬರು ಪ್ರವಾಸ ಕೈಗೊಂಡು ಇಲ್ಲಿನ ಸೌಂದರ್ಯ ಅನುಭವಿಸಲು ಹೇಳುತ್ತೇನೆ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಸಚಿನ್ ತೆಂಡುಲ್ಕರ್ ಕಾಶ್ಮೀರದ ಗುಲ್ಮರ್ಗ್‌ಗೆ ಭೇಟಿ ನೀಡಿದ್ದರು. ಇನ್ನು ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿರುವ ಲೈನ್‌ ಆಫ್‌ ಕಂಟ್ರೋಲ್‌ನ ಅಮನ್ ಸೇತು ಬ್ರಿಡ್ಜ್‌ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿ. ಕಮನ್ ಪೋಸ್ಟ್ ಬಳಿ ಇರುವ ಸೈನಿಕರ ಜತೆ ಮಾತುಕತೆ ನಡೆಸಿದ್ದರು.

    ಇನ್ನು ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್ ಕಾಶ್ಮೀರದಲ್ಲಿರುವ ಪ್ರಖ್ಯಾತ ಸ್ಥಳೀಯ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮಗೆ ತಮ್ಮ ಸಹೋದರಿ ಮೊದಲ ಬಾರಿಗೆ ನೀಡಿದ ಕಾಶ್ಮೀರಿ ವಿಲ್ಲೋ ಬ್ಯಾಟ್ ನೀಡಿದ ಕ್ಷಣವನ್ನು ಮೆಲುಕು ಹಾಕಿದ್ದರು. ಕಾಶ್ಮೀರಿ ಬ್ಯಾಟ್ ಹಾಗೂ ತಮ್ಮ ನಡುವಿನ ದೀರ್ಘ ಒಡನಾಟವನ್ನು ತೆಂಡುಲ್ಕರ್ ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts