ಪಾಲ್ಘರ್: ಕಾರಿನ ಸನ್‌ರೂಫ್‌ನಿಂದ ಹೊರ ಬಂದು ಪ್ರಯಾಣವನ್ನು ಆನಂದಿಸುತ್ತಿದ್ದ 8 ವರ್ಷದ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರ ಸುತ್ತಿಕೊಂಡು ಮೃತಪಟ್ಟಿದ್ದಾನೆ.
ಆತ ತನ್ನ ಕುಟುಂಬದ ಜೊತೆಗೆ ಜನವರಿ 21ರಂದು ಪಾಲ್ಘರ್‌ನಲ್ಲಿರುವ ತಮ್ಮ ಮನೆಗೆ ರಜೆಯ ತೆರಳುತ್ತಿದ್ದರು. ಕಾರಿನಲ್ಲಿ ಬಾಲಕನ ತಂದೆ, ತಾಯಿ, ಸಹೋದರಿ ಮತ್ತು ಅಜ್ಜಿ ಇದ್ದರು.
ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮ್ಯಾನರ್‌ನಿಂದ 10-15 ಕಿಮೀ ದೂರದಲ್ಲಿ ಬಾಲಕ ದಿಶಾನ್‌ನ ಕುತ್ತಿಗೆಗೆ ಗಾಳಿಪಟದ ಟ್ವೈನ್ ದಾರ ಸುತ್ತಿಕೊಂಡು ಗಾಯವಾಗಿದೆ. ತೀವ್ರ ರಕ್ತಸ್ರಾವದ ಸ್ಥಿತಿಯಲ್ಲಿದ್ದ ಬಾಲಕನನ್ನು ಆತನ ಪೋಷಕರು ಮ್ಯಾನರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಗೆ ಹೋಗಲು ಸುಮಾರು 20 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ. ವೈದ್ಯೆಯಾಗಿರುವ ದಿಶಾನ್‌ನ ತಾಯಿ ಆಸ್ಪತ್ರೆಯ ವೈದ್ಯರೊಂದಿಗೆ ಸೇರಿ ಆತನ ಕುತ್ತಿಗೆಯ ಮೇಲಿನ ಗಾಯಕ್ಕೆ ಚಿಕಿತ್ಸೆ ನೀಡಿ ರಕ್ತಸ್ರಾವ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ, ಆಂಬ್ಯುಲೆನ್ಸ್‌ಗೆ ಕೂಡ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಬಾಲಕನನ್ನು ಚಿಕಿತ್ಸೆಗಾಗಿ ಮುಂಬೈಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ದಿಶಾನ್ ಮೃತಪಟ್ಟಿದ್ದಾನೆ.
ದಿಶಾನ್‌ನ ಪ್ರಾಣ ತೆಗೆದ ಟ್ವೈನ್ ದಾರ ನೈಲಾನ್‌ನಿಂದ ಮಾಡಲ್ಪಟ್ಟಿದೆ. “ಕಾರಿನ ಸನ್ ರೂಫ್ ಜೀವಕ್ಕೆ ಅಪಾಯಕಾರಿಯಾಗಿದೆ. ಅದರಲ್ಲೂ ಗಾಳಿಪಟವನ್ನು ಹಾರಿಸುವ ಸೀಸನ್ನಲ್ಲಿ ಇನ್ನಷ್ಟು ಜಾಗರೂಕರಾಗಿ ಇರಬೇಕು” ಎಂದು ಡಾ. ತಿವಾರಿ ಹೇಳಿದರು. (ಏಜೆನ್ಸೀಸ್)