More

    ಬಾಳೆಹಣ್ಣು-ಚಿಕ್ಕಿ ಬೇಡ, ಮೊಟ್ಟೆನೇ ಬೇಕು ಎಂದ ಮಕ್ಕಳು!

    ಬೆಂಗಳೂರು: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರವಾಗಿ ಚರ್ಚೆ ನಡೆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮಕ್ಕಳ‌ ಅಭಿಪ್ರಾಯ ಸಂಗ್ರಹಿಸಿತ್ತು. ಆಗ ಮೊಟ್ಟೆ ಬೇಕು ಎಂದು ಹೆಚ್ಚಿನ ಮಕ್ಕಳು ಹೇಳಿದ್ದಾರೆ. ಸದ್ಯ 1 ರಿಂದ 8 ತರಗತಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡಲಾಗುತ್ತಿದೆ.

    ಶಿಕ್ಷಣ ಇಲಾಖೆ ಒಟ್ಟು 47.97 ಲಕ್ಷ ಸರ್ಕಾರಿ ಶಾಲಾ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದ್ದು 28.97 ಲಕ್ಷ ಮಕ್ಕಳು ಮೊಟ್ಟೆ ಬೇಕು ಎಂದಿದ್ದಾರೆ. 3.37 ಲಕ್ಷ ವಿದ್ಯಾರ್ಥಿಗಳು ಬಾಳೆಹಣ್ಣು ಬೇಕು ಎಂದಿದ್ದು 2.27 ಲಕ್ಷ ವಿದ್ಯಾರ್ಥಿಗಳು ಚಿಕ್ಕಿ ತಿನ್ನೋಕೆ ಆಸಕ್ತಿ ಹೊಂದಿದ್ದಾರೆ.

    ಹೆಚ್ಚಿನ‌ ಪ್ರಮಾಣದ ಮಕ್ಕಳು ಮೊಟ್ಟೆ ಬೇಕು ಎಂದಿದ್ದು ಮೊಟ್ಟೆ ಬೆಲೆ ಏರಿಕೆಯಾದರೂ ಯಾವುದೇ ಕಾರಣಕ್ಕೂ ಮಕ್ಕಳಿಗೆ ಎಗ್ ಕೊಡೋದನ್ನ ನಿಲ್ಲಿಸುವಂತಿಲ್ಲ ಎಂದು ನಿರ್ಧಾರವಾಗಿದ್ದು ಈಗಾಗಲೇ ಈ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts