More

    ಇನ್ನು ಮುಂದೆ ಹಾಫ್ ಹೆಲ್ಮೆಟ್ ಹಾಕಿದ್ರೆ ದಂಡ ಗ್ಯಾರಂಟಿ..!

    ಬೆಂಗಳೂರು: ಇನ್ನು ಮುಂದೆ ಹಾಫ್​ ಹೆಲ್ಮೆಟ್​ ಧರಿಸಿ ಯಾರೂ ದ್ವಿಚಕ್ರ ವಾಹಗಳಲ್ಲಿ ಸವಾರಿ ಮಾಡುವಂತಿಲ್ಲ ಎಂದು ಈಗಾಗಲೇ ಆದೇಶ ಜಾರಿಯಾಗಿದ್ದು ಈಗ ಪೊಲೀಸರು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿದ್ದಾರೆ.

    ಇದನ್ನೂ ಓದಿ: ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕಿದ್ರೆ ಬೀಳತ್ತೆ ದಂಡ..!

    ಇನ್ನುಮುಂದೆ ಹಾಫ್​ ಹೆಲ್ಮೆಟ್​ ಹಾಕಿಕೊಂಡು ಗಾಡಿ ಚಲಾಯಿಸುತ್ತಾ ಪೊಲೀಸರಿಂದ ತಪ್ಪಿಸಿಕೊಂಡರೂ ನೀವು ಕ್ಯಾಮರಾದಲ್ಲಿ‌ ಸೆರೆಯಾಗಲಿದ್ದೀರಿ. ಇದರ ಆಧಾರದ ಮೇಲೆ ಕೇಸ್​ ಕೂಡ ದಾಖಲಾಗಲಿದೆ.

    ಹೌದು, ನೀವು ಇನ್ನುಮುಂದೆ ಹಾಫ್​ ಹೆಲ್ಮೆಟ್​ ಧರಿಸಿ ಪ್ರಯಾಣ ಮಾಡಿದರೆ ಅದನ್ನು ಹೆಲ್ಮೆಟ್​ ರಹಿತ ವಾಹನ ಚಾಲನೆ ಎಂದೇ ಪರಿಗಣಿಸಲಾಗುತ್ತದೆ. ಈ ಮೂಲಕ ಹಾಫ್ ಹೆಲ್ಮೆಟ್, ಕಳಪೆ ಮಟ್ಟದ ಹೆಲ್ಮೆಟ್​ಗಳಿಗೆ ಬ್ರೇಕ್ ಬೀಳಲಿದೆ.

    ಇದನ್ನೂ ಓದಿ: ಹಾಫ್ ಹೆಲ್ಮೆಟ್ ಹಾಕಿ ಬಂದ ಪೊಲೀಸ್; ದಂಡ ಕಟ್ಟಿ ಹೋದ್ರು..!

    ಕಳೆದ ಎರಡು ತಿಂಗಳಲ್ಲಿ 13 ಲಕ್ಷ ಪ್ರಕರಣಗಳು ದಾಖಲಾಗಿದ್ದು ಕಳೆದ ನವೆಂಬರ್‌ನಲ್ಲಿ ನಲ್ಲಿ 8 ಲಕ್ಷ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ ನಲ್ಲಿ 5 ಲಕ್ಷ ‌ಪ್ರಕರಣ ಬೆಳಕಿಗೆ ಬಂದಿತ್ತು. ಹೀಗೆ ಹೆಲ್ಮೆಟ್​ ಇಲ್ಲದೇ ಅಥವಾ ಹಾಫ್​ ಹೆಲ್ಮೆಟ್​ ಧರಿಸಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚೇ ಇದೆ.

    ಹೆಲ್ಮೆಟ್​ ಇಲ್ಲದೇ ಅಥವಾ ಹಾಫ್​ ಹೆಲ್ಮೆಟ್​ ಧರಿಸಿ ಪ್ರಯಾಣಿಸಿದ್ದನ್ನು ಪೊಲೀಸರು ನೋಡಿಲ್ಲ ಅಂತ ಅಂದುಕೊಂಡರೂ ಫೈನ್​ ಬೀಳೋದು ಮಾತ್ರ ಗ್ಯಾರೆಂಟಿ. ಸಿಗ್ನಲ್​ಗಳಲ್ಲಿ ಇರುವ ಅತ್ಯಾಧುನಿಕ ಕ್ಯಾಮಾರ ಇದೆಲ್ಲವನ್ನು ಸಹ ಕವರ್ ಮಾಡಿ ಸಂಚಾರಿ ನಿರ್ವಹಣಾ ಕೇಂದ್ರಕ್ಕೆ ಕಳಿಸುತ್ತದೆ. ಐಎಸ್‌ಐ‌ ಮಾರ್ಕ್ ಇರುವ ಅಥವಾ ಕಿವಿಯನ್ನು ಸಂಪೂರ್ಣವಾಗಿ ಮುಚ್ಚುವ ಹೆಲ್ಮೆಟ್​ನನ್ನು ಧರಿಸಬೇಕು. ಇಲ್ಲವಾದಲ್ಲಿ ಇದು ಟ್ರಾಫಿಕ್​ ನಿಯಮಗಳ ಉಲ್ಲಂಘನೆ ಮಾಡಿದಂತೆ ಆಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts