More

    ಸರ್ಕಾರಿ ಕೆಲಸ ಉಳಿಸಿಕೊಳ್ಳಲು 5 ತಿಂಗಳ ಮಗುವನ್ನು ನಾಲೆಗೆ ಎಸೆದ ದಂಪತಿ!

    ಬಿಕಾನೇರ್​: ರಾಜಸ್ಥಾನದಲ್ಲಿ ಸರ್ಕಾರಿ ನೌಕರರು ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವಂತಿಲ್ಲ ಎನ್ನುವ ಕಾನೂನು ಇದೆ. ಕಾರಣಕ್ಕೆ ಸರ್ಕಾರಿ ನೌಕರಿ ಕಳೆದುಕೊಳ್ಳುವ ಭಯಕ್ಕೆ ಈಡಾಗಿ ಈ ದಂಪತಿ, ತಮ್ಮ 5 ತಿಂಗಳ ಮಗುವನ್ನು ನಾಲೆಗೆ ಎಸೆದು ಅದರ ಸಾವಿಗೆ ಕಾರಣರಾಗಿದ್ದಾರೆ.

    ಸರ್ಕಾರಿ ಉದ್ಯೋಗವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಾಜಸ್ಥಾನದ ಬಿಕಾನೇರ್‌ನಲ್ಲಿ ಸೋಮವಾರ ತಮ್ಮ ಐದು ತಿಂಗಳ ಹೆಣ್ಣು ಮಗುವನ್ನು ಕಾಲುವೆಗೆ ಎಸೆದ ಆರೋಪದ ಮೇಲೆ ಪುರುಷ ಮತ್ತು ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಾಲೆಯಲ್ಲಿ ಬಿದ್ದ 5 ತಿಂಗಳ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಆರೋಪಿ ತಂದೆಯನ್ನು ಜನ್ವರ್‌ಲಾಲ್ ಎಂದು ಗುರುತಿಸಲಾಗಿದೆ. ಅವರು ಚಂದಾಸರ್ ಗ್ರಾಮದಲ್ಲಿ ಗುತ್ತಿಗೆ ಶಾಲಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಜನ್ವರ್‌ಲಾಲ್ ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ಪ್ರಮಾಣ ಪತ್ರ ನೀಡಿದ್ದರು. ಪೊಲೀಸರ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವುದರಿಂದ ಕೆಲಸ ಕಳೆದುಕೊಳ್ಳಬಹುದು ಎಂದು ಅವರು ಆತಂಕದಿಂದ ಹೀಗೆ ಮಾಡಿದ್ದಾರೆ.

    “ಬಿಕಾನೇರ್‌ನ ಛತ್ತರ್‌ಗಢದಲ್ಲಿ ಪುರುಷ ಮತ್ತು ಮಹಿಳೆಯ ಜೋಡಿಯೊಂದು ಹೆಣ್ಣು ಮಗುವನ್ನು ಕಾಲುವೆಗೆ ಎಸೆದಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ನಂತರ ಮೃತ ಮಗುವಿನ ಶರೀರವನ್ನು ಪೊಲೀಸರು ವಶಪಡಿಸಿಕೊಂಡರು. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು ಪುರುಷ ಮತ್ತು ಮಹಿಳೆ ಮೃತ ಹೆಣ್ಣು ಮಗುವಿನ ಪೋಷಕರು ಎಂದು ಕಂಡುಬಂದಿದೆ ಎಂದು ಸರ್ಕಲ್ ಆಫೀಸರ್ ವಿನೋದ್ ಕುಮಾರ್’ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts