More

    ‘ನಾನು ಭಾರತದ ಸೇನೆಯಿಂದ ಪ್ರೂಫ್​ ಕೇಳಲ್ಲ’ ಎಂದ ರಾಹುಲ್​ ಗಾಂಧಿ!

    ಜಮ್ಮು: 2016ರಲ್ಲಿ ಪಾಕಿಸ್ತಾನದ ಎಲ್‌ಒಸಿ ಬಳಿ ಭಯೋತ್ಪಾದಕ ಶಿಬಿರಗಳ ಮೇಲೆ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್‌ಗಳನ್ನು ಪ್ರಶ್ನಿಸಿ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ನೀಡಿದ್ದ ಹೇಳಿಕೆಯನ್ನು ರಾಹುಲ್ ಗಾಂಧಿ “ಹಾಸ್ಯಾಸ್ಪದ” ಎಂದು ಕರೆದ್ದಾರೆ. ದಿಗ್ವಿಜಯ್​ ಸಿಂಗ್​ರ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.

    ಜಮ್ಮುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ‘ದಿಗ್ವಿಜಯ ಸಿಂಗ್ ಹೇಳಿರುವುದನ್ನು ನಾನು ಒಪ್ಪುವುದಿಲ್ಲ. ನಾವು ನಮ್ಮ ಸೇನೆಯನ್ನು ಸಂಪೂರ್ಣವಾಗಿ ನಂಬುತ್ತೇವೆ. ಭಾರತೀಯ ಸೇನೆ ಏನಾದರೂ ಮಾಡಿದರೆ ಸಾಕ್ಷಿ ಒದಗಿಸುವ ಅಗತ್ಯವಿಲ್ಲ. ಅವರು ಹೇಳಿದ್ದನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

    ಈ ಹಿಂದೆಯೂ ತಮ್ಮ ಹೇಳಿಕೆಗಳಿಂದಾಗಿ ಪಕ್ಷ ತೊರೆದಿರುವ ದಿಗ್ವಿಜಯ್​ ಸಿಂಗ್ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದಾಗ ರಾಹುಲ್​ ಗಾಂಧಿ, ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ನಂಬುವ ಪಕ್ಷ. ನಮ್ಮಲ್ಲಿ ಸರ್ವಾಧಿಕಾರಿ ಪದ್ಧತಿ ಇಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ದಿಗ್ವಿಜಯ್​ ಸಿಂಗ್ ನೀಡಿರುವ ಹೇಳಿಕೆ ವೈಯಕ್ತಿವಾದದ್ದು. ಅದು ಪಕ್ಷದ ದೃಷ್ಟಿಕೋನವಲ್ಲ. ಎಂದು ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts