More

    ಹತ್ತು ದಿನಗಳ ಚಿಕಿತ್ಸೆಗೆ 54 ಲಕ್ಷ ರೂ. ಬೆಲೆ ವಿಧಿಸಿ ಇನ್ನೂ ಹಣ ಬಾಕಿ ಇದೆ ಎಂದ ಖಾಸಗಿ ಆಸ್ಪತ್ರೆ!

    ಹೈದರಾಬಾದ್: ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ವಸೂಲಿ ಮಾಡುವುದು ಸರ್ವೇ ಸಾಮಅನ್ಯ ಎಂದಾಗಿದ್ದರೂ ಈಗ ಬೆಳಕಿಗೆ ಬಂದಿರುವ ಘಟನೆಯಲ್ಲಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬರು 10 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದು ಒಟ್ಟು 54 ಲಕ್ಷ ರೂ. ಹಣ ತೆರಬೇಕಾಗಿ ಬಂದಿದೆ.

    ಮಜ್ಲಿಸ್ ಬಚಾವೋ ತೆಹ್ರೀಕ್ (MBT) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಅವರು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್‌ನಲ್ಲಿ ರೋಗಿಯ ಬಿಲ್ ಮತ್ತು ವಿವರಗಳನ್ನು ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.

    ಟ್ವಿಟರ್​ನಲ್ಲಿ ಹಂಚಿಕೊಂಡ ಬಿಲ್ ಪ್ರಕಾರ ಹೈದರಾಬಾದ್​ನ ಸಿಟಿಜನ್ ಸ್ಪೆಷಾಲಿಟಿ ಆಸ್ಪತ್ರೆ, 44 ವರ್ಷದ ರೋಗಿ ಸೈಯದ್ ರಹಮತ್ ಉದ್ದೀನ್ ಅವರು ಕಾರ್ಡಿಯೋಜೆನಿಕ್ ಆಘಾತ ಮತ್ತು ಇತರ ಸಂಕೀರ್ಣತೆಗಳ ನಡುವೆ ತೀವ್ರವಾದ ಎಡ ಕುಹರದ ಸಮಸ್ಯೆಯನ್ನು ಅನುಭವಿಸಿದ ನಂತರ ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಯಲ್ಲಿ ಕರೋನರಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು.

    ರೋಗಿಗೆ ಕನ್ಸಲ್ಟೇಷನ್​ ಫೀ ಹೆಸರಿನಲ್ಲಿ 50,000 ರೂ. ಐಸಿಯು ಮತ್ತು ರೂಮ್‌ಗಳಿಗೆ ರೂ 3,00,000 ರೂ. ಆಂಜಿಯೋಪ್ಲಾಸ್ಟಿ ಚಿಕಿತ್ಸೆಯ ಶುಲ್ಕವಾಗಿ 4,00,000 ರೂ., ಔಷಧಗಳು ಮತ್ತು ಇತರೆ ವೈದ್ಯಕೀಯ ಉಪಕರಣಗಳಿಗೆ 11,00,000 ರೂ., ಪರಿಶೀಲನೆಗೆ 3,50,000 ರೂ. ಇತರ ಸಿಲರ್‌ಗಳಿಗೆ 5,00,00 ರೂ. ಶುಲ್ಕ ವಿಧಿಸಲಾಗಿದೆ. ಹೀಗೆಯೇ ಇತರೆ ಖರ್ಚುಗಳನ್ನೂ ಸೇರಿಸಿನ ಒಟ್ಟು ಬಿಲ್​ನಲ್ಲಿ 54 ಲಕ್ಷ ರೂ. ಎಂದು ನಮೂದಿಸಲಾಗಿದೆ.

    ಅಮ್ಜೆದ್ ಉಲ್ಲಾ ಖಾನ್ ಪ್ರಕಾರ, ರೋಗಿಯ ಕುಟುಂಬದ ಸದಸ್ಯರು ಇದುವರೆಗೆ ಆಸ್ಪತ್ರೆಗೆ 20 ಲಕ್ಷ ರೂ. ಕಟ್ಟಿದ್ದು ಆಸ್ಪತ್ರೆಯವರು ಇನ್ನೂ 29 ಲಕ್ಷ ರೂ.ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.‘

    ಇದನ್ನೂ ಓದಿ: ‘ಮೇಡ್​ ಇನ್​ ಜಪಾನ್​’ಗೆ ಖ್ಯಾತವಾಗಿದ್ದ ದೇಶದಲ್ಲೀಗ ಸಂತಾನಶಕ್ತಿಯೇ ಕುಸಿತ!

    ಆಸ್ಪತ್ರೆಯಲ್ಲಿ ಐಪಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಶರತ್ ಚಂದ್ರರನ್ನು ಸುದ್ದಿ ಏಜೆನ್ಸಿಗಳು ಸಂಪರ್ಕಿಸಿದಾಗ ಅವರು ‘ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿರುವ ಬಿಲ್ ಅನ್ನು ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ರೋಗಿಗೆ ನೀಡಲಾಗಿತ್ತು. ರೋಗಿಯ ಆರೋಗ್ಯದಲ್ಲಿ ಅನೇಕ ಗಂಭೀರ ಸಮಸ್ಯೆಗಳಿವೆ ಎಂದು ಅವರು ಹೇಳಿದರು. ಆದರೂ, ಹೆಚ್ಚಿನ ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts