More

    ಪಾಕಿಸ್ತಾನದ ರಾಜಧಾನಿಯಲ್ಲೇ ವಿದ್ಯುತ್​ ಇಲ್ಲ; ನೆರೆಯ ದೇಶಕ್ಕೆ ಕರೆಂಟ್​ ಇಲ್ಲದೇ ಹೊಡೆದ ಶಾಕ್​..!

    ನವದೆಹಲಿ: ಇಂದು (ಜ.23) ಬೆಳಗ್ಗೆ ಇಡೀ ಪಾಕಿಸ್ತಾನದಲ್ಲಿ ರಾಷ್ಟ್ರೀಯ ವಿದ್ಯುತ್​​ ಗ್ರಿಡ್‌ ಸ್ಥಗಿತಗೊಂಡಿದ್ದ ಕಾರಣ ನೆರೆಯ ದೇಶದಲ್ಲಿ ಯಾರಿಗೂ  ವಿದ್ಯುತ್ ಸಿಗುತ್ತಿಲ್ಲ. ಕರಾಚಿ, ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಅದರಲ್ಲೂ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ನಲ್ಲೇ ವಿದ್ಯುತ್​ ಇಲ್ಲದಿರುವುದು, ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ.  

    ಪಾಕಿಸ್ತಾನದ ಇಂಧನ ಸಚಿವಾಲಯ ಬೆಳಗ್ಗೆ 7.34ಕ್ಕೆ (ಭಾರತದಲ್ಲಿ ಸುಮಾರು 8 ಗಂಟೆ ಹೊತ್ತಿಗೆ) ಗ್ರಿಡ್‌ನಲ್ಲಿ ವ್ಯಾಪಕ ಸ್ಥಗಿತ ಕಂಡುಬಂದಿದೆ ಎಂದು ಟ್ವೀಟ್ ಮಾಡಿದೆ. ಟ್ವೀಟ್​ನಲ್ಲಿ “ಪ್ರಾಥಮಿಕ ವರದಿಗಳ ಪ್ರಕಾರ, ರಾಷ್ಟ್ರೀಯ ಗ್ರಿಡ್‌ನ ಸಿಸ್ಟಮ್ ಫ್ರೀಕ್ವೆನ್ಸಿ ಇಂದು ಬೆಳಿಗ್ಗೆ 7:34 ಕ್ಕೆ ಕಡಿಮೆಯಾಗಿದೆ. ವಿದ್ಯುತ್ ವ್ಯವಸ್ಥೆಯಲ್ಲಿ ವ್ಯಾಪಕ ಸ್ಥಗಿತ ಕಂಡುಬಂದಿದೆ. ಸಿಸ್ಟಮ್​ನ ನಿರ್ವಹಣಾ ಕಾರ್ಯ ವೇಗವಾಗಿ ಪ್ರಗತಿಯಲ್ಲಿದೆ” ಎಂದು ಉರ್ದುನಲ್ಲಿ ಬರೆಯಲಾಗಿದೆ.

    ಇಂದು ಬೆಳಗ್ಗೆ ಸಿಸ್ಟಮ್‌ಗಳನ್ನು ಚಾಲೂ ಮಾಡಿದಾಗ ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಜಮ್‌ಶೋರೊ ಮತ್ತು ದಾದು ನಗರಗಳ ನಡುವೆ ಫ್ರೀಕ್ವೆನ್ಸಿಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ವಿದ್ಯುತ್ ಸಚಿವ ಖುರ್ರುಮ್ ದಸ್ತಗಿರ್ ಮಾಹಿತಿ ನೀಡಿದ್ದಾರೆ.

    ಪರಿಸ್ಥಿತಿ ಎಷ್ಟು ಹದಗೆಟ್ಟಿದೆ?
    ದಸ್ತಗೀರ್ ಪ್ರಕಾರ, ಇದು ದೊಡ್ಡ ಬಿಕ್ಕಟ್ಟು ಅಲ್ಲ. ಪಾಕಿಸ್ತಾನದಲ್ಲಿ ಕೆಲವು ಗ್ರಿಡ್‌ಗಳನ್ನು ಈಗಾಗಲೇ ಪುನಃಸ್ಥಾಪಿಸಲಾಗಿದ್ದು ಮುಂದಿನ 12 ಗಂಟೆಗಳಲ್ಲಿ ದೇಶಾದ್ಯಂತ ವಿದ್ಯುತ್ ಅನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಾಗುವುದು. ಎಂದು ಸಚಿವರು ಹೇಳಿರುವ ಬಗ್ಗೆ ಪಾಕಿಸ್ತಾನಿ ಮಾಧ್ಯಮ ದ ಡಾನ್​ ವರದಿ ಮಾಡಿದೆ.

    ಪಾಕಿಸ್ತಾನದಲ್ಲಿ ಇಂಧನದ ಪರಿಸ್ಥಿತಿ ಹೇಗಿದೆ?
    ಪಾಕಿಸ್ತಾನ ದೀರ್ಘ ಕಾಲದಿಂದ ವ್ಯಾಪಕವಾದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಈ ಪರಿಸ್ಥಿತಿ ಕನಿಷ್ಠ ಹಲವಾರು ವರ್ಷಗಳವರೆಗೆ ಇರುತ್ತದೆ ಎಂದು ತಜ್ಞರು ಊಹಿಸಿದ್ದಾರೆ. 2022ರ ಬೇಸಿಗೆಯಲ್ಲಿ ದೀರ್ಘಾವಧಿಯ ರಾಷ್ಟ್ರವ್ಯಾಪಿ ವಿದ್ಯುತ್ ಕಡಿತದೊಂದಿಗೆ ಪಾಕಿಸ್ತಾನದಲ್ಲಿ ಬಿಕ್ಕಟ್ಟು ಉತ್ತುಂಗಕ್ಕೆ ಏರಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts