More

    ‘ಮೇಡ್​ ಇನ್​ ಜಪಾನ್​’ಗೆ ಖ್ಯಾತವಾಗಿದ್ದ ದೇಶದಲ್ಲೀಗ ಸಂತಾನಶಕ್ತಿಯೇ ಕುಸಿತ!

    ನವದೆಹಲಿ: ಜಪಾನ್‌ನಲ್ಲಿ ಜನಸಂಖ್ಯಾ ಬಿಕ್ಕಟ್ಟು ಶುರುವಾಗಿ ಬಹಳ ಸಮಯವಾಗಿದೆ. 70ರ ದಶಕದಿಂದಲೂ ಮಕ್ಕಳನ್ನು ಪಡೆಯುವ ಮಹಿಳೆಯರ ಸಂಖ್ಯೆಯು ಸ್ಥಿರವಾಗಿ ಇಳಿಮುಖವಾಗಿದೆ. 2021 ರಲ್ಲಿ ಮೈನಸ್ 0.5ರ ಜನಸಂಖ್ಯೆಯ ಬೆಳವಣಿಗೆಯ ದರ ಉಂಟಾಗಿತ್ತು. ಇದು ಈಗ ಜಪಾನ್​ನ ತುರ್ತು ಪರಿಸ್ಥಿತಿಯಾಗಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಜಪಾನ್​ನ ಪ್ರಧಾನಿ ಫುಮಿಯೋ ಕಿಶಿಡಾ, ‘ಈಗ ಜನಸಂಖ್ಯೆ ಹೆಚ್ಚು ಮಾಡದೇ ಹೋದರೆ, ಮುಂದೆ ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಿಲ್ಲ’ ಎಂದಿದ್ದಾರೆ!

    ಒಂದು ಕಾಲದಲ್ಲಿ ಮೇಡ್​ ಇನ್​ ಜಪಾನ್​ ಎಂದರೆ ಎಲ್ಲರ ಕಿವಿ ನೆಟ್ಟಗಾಗುತ್ತಿತ್ತು. ಅಂತಹ ದೇಶದಲ್ಲಿ ಇಂದು ಯುವ ಜನತೆಗೆ ಮಕ್ಕಳೇ ಬೇಡವಾಗಿದ್ದಾರೆ. ಒಂದು ದೇಶದ ಜನಸಂಖ್ಯೆ ಇದ್ದಷ್ಟೇ ಇರಬೇಕು ಎಂದರೆ ಅದರ ಫರ್ಟಿಲಿಟಿ ದರ 2.0 ಇರಬೇಕು. ಅಂದರೆ ಪ್ರತೀ ಜೋಡಿಗೆ ಇಬ್ಬರು ಮಕ್ಕಳು. ಅಲ್ಲಿ ಮಾತ್ರ ಪ್ರತೀ ಹತ್ತು ಜೋಡಿಗಳಿಗೆ ಕೇವಲ 5 ಮಕ್ಕಳು ಹುಟ್ಟುತ್ತಿದ್ದಾರೆ.

    ಈ ನಡುವೆ ಜಪಾನ್​ನ ಗಡಿಯಲ್ಲಿ ಚೀನಾ ಹಾಗೂ ಉತ್ತರ ಕೊರಿಯಾ ಯುದ್ಧ ಸನ್ನದ್ಧವಾಗಿದ್ದು ಇದು ಜನಸಂಖ್ಯೆ ಸಮಸ್ಯೆ ನಡುವೆ ಇನ್ನೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗ ಜಪಾನ್​ನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದರೆ ಯುದ್ಧದ ಬಗ್ಗೆ ಮತ್ತೆ ಯೋಚಿಸಿದರೆ ಆಗಬಹುದು, ಸದ್ಯಕ್ಕೆ ಜನಸಂಖ್ಯೆಯನ್ನು ತುರ್ತಾಗಿ ಹೆಚ್ಚಿಸಬೇಕು ಎನ್ನುವ ಹಂತಕ್ಕೆ ತಲುಪಿದೆ.

    ಸಮಸ್ಯೆಯ ಮೂಲ:
    ಇಡೀ ಜಪಾನ್​ ದೇಶದಲ್ಲಿ ಒಟ್ಟಾರೆಯಾಗಿ ಕಡಿಮೆ ಜನಸಂಖ್ಯೆ ಇದ್ದರೂ ಯುವ ಜನತೆ ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬಂದು ನೆಲೆಸಲು ಶುರು ಮಾಡಿದೆ. ಇದು ವಿಶೇಷವಾಗಿ ಒಸಾಕಾ ಮತ್ತು ಟೋಕಿಯೊದಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಕಂಡುಬರುತ್ತಿದೆ. ಇದರಿಂದಾಗಿ ನಗರ ಪ್ರದೇಶಗಳಲ್ಲಿ ಜನಸಂಖ್ಯೆಯ ಸಾಂಧ್ರತೆ ಕೂಡ ಹೆಚ್ಚುತ್ತಿದೆ.

    ಜಪಾನಿನ ಸರ್ಕಾರ, ಟೋಕಿಯೊದಲ್ಲಿನ ಯುವ ಕುಟುಂಬಗಳಿಗೆ ಹೆಚ್ಚು ಗುಡ್ಡಗಾಡು ಮತ್ತು ಕಡಿಮೆ ಜನವಸತಿ ಪ್ರದೇಶಗಳಿಗೆ ತೆರಳಲು ಪ್ರತಿ ಮಗುವಿಗೆ 1 ಮಿಲಿಯನ್ ಯೆನ್ (ಸುಮಾರು 60 ಲಕ್ಷ ರೂ.)ಗಳನ್ನು ನೀಡುತ್ತಿದೆ. ಇದು ಹಿಂದಿದ್ದ 3 ಲಕ್ಷ ಯೆನ್‌ಗಳ ಪ್ರೋತ್ಸಾಹದ 3 ಪಟ್ಟು ಹೆಚ್ಚು!

    ನಗರದಲ್ಲಿ ಮಕ್ಕಳನ್ನು ಸಾಕುವುದೇ ಅತೀ ದೊಡ್ಡ ಸಮಸ್ಯೆ!
    ನಗರ ಜೀವನದ ಗ್ಲಾಮರ್, ವೈವಿಧ್ಯತೆ ಮತ್ತು ಸ್ವಾತಂತ್ರ್ಯವನ್ನು ಜನರಿಗೆ ತ್ಯಜಿಸಲು ಹಣ ಮಾತ್ರ ಸಾಕಾಗುವುದಿಲ್ಲ ಎಂದು ಹಲವರು ವಾದಿಸುತ್ತಾ ಇದ್ದಾರೆ. ಅನೇಕರಿಗೆ, ಹಣದ ಪ್ರೋತ್ಸಾಹವೇ ಬೇಕಾಗಿಲ್ಲ. ಅಲ್ಲಿರುವ ಅಸಲಿ ಸಮಸ್ಯೆ ಏನೆಂದರೆ, ನಗರದ ಐಷಾರಾಮಕ್ಕೆ ಹೊಂದಿಕೊಂಡಿರುವ ಜನರಿಗೆ ಹಳ್ಳಿ ಜೀವನ ಬೇಡವಾಗಿದೆ. ಇನ್ನು ನಗರ ಪ್ರದೇಶದಲ್ಲಿ ಮಕ್ಕಳನ್ನು ಹೆತ್ತರೆ ಅವರನ್ನು ಸಾಕುವುದು ಇನ್ನೊಂದು ದೊಡ್ಡ ಸಮಸ್ಯೆ.

    ಹೀಗೆ ಜಪಾನ್​ನಲ್ಲಿ ಎಲ್ಲವೂ ಅನುಕೂಲಕರವಾಗಿದ್ದರೂ ಜನರಿಗೆ ಮಕ್ಕಳು ಬೇಡವಾಗಿದ್ದಾರೆ. ಸದ್ಯ ಜಪಾನ್​ನಲ್ಲಿ ಜನರ ಫರ್ಟಿಲಿಟಿ ದರ ತೀರಾ ಕಮ್ಮಿ ಮಟ್ಟಕ್ಕೆ ಇಳಿಯುತ್ತಿದ್ದು ಸದ್ಯ ಅದು 0.8ರ ಆಸುಪಾಸು ಇದೆ. ಇದು ಜಗತ್ತಿನಲ್ಲೇ ಅತೀ ಕಮ್ಮಿ. ಈ ಹಿನ್ನೆಲೆಯಲ್ಲಿ ಈಗ ಜಪಾನ್​ನ ಪ್ರಧಾನಿ, ಯುದ್ಧದ ಸಂದರ್ಭ ಇದ್ದರೂ ಅದನ್ನು ಲೆಕ್ಕಿಸದೇ ಜನಸಂಖ್ಯೆ ಹೆಚ್ಚಿಸುವತ್ತ ಹೆಚ್ಚಿನ ಹಣ ವ್ಯಯ ಮಾಡಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts