More

    ಆರೋಪಿ ಆರ್​ಡಿ ಪಾಟೀಲ್‌ನಿಂದ ತನಿಖೆ ದಿಕ್ಕು ತಪ್ಪಿಸಲು ಸಂಚು!

    ಬೆಂಗಳೂರು:  ಸಿಐಡಿ ಡಿವೈಎಸ್ ಪಿ ಶಂಕರಗೌಡ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಗೇ ಹಣ ಕೇಳಿದ ಪ್ರಕರಣಕ್ಕೆ ಇದೀಗ ಮಗದೊಂದು ಟ್ವೀಸ್ಟ್ ಸಿಕ್ಕಿದೆ. ಸಿಐಡಿ ಕಸ್ಟಡಿಯಲ್ಲಿರುವಾಗಲೇ ಅಧಿಕಾರಿಗಳ ವಿರುದ್ಧ ಕುತಂತ್ರ ಆರ್.ಡಿ.ಪಾಟೀಲ್ ರಚಿಸಿದ್ದ.

    ಸಿಐಡಿ ತನಿಖೆ ವೇಳೆಯು ಕದ್ದು ಡಿವೈಸ್ ಬಳಸಿ ಸಿಐಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುವ ತಂತ್ರವನ್ನು ಆರ್.ಡಿ.ಪಾಟೀಲ್ ಮಾಡಿದ್ದ. ಸಿಐಡಿ ಕಸ್ಟಡಿಯಲ್ಲಿರುವಾಗ ಪದೇ ಪದೇ ಬಾತ್ ರೂಂ ನೆಪ ಹೇಳಿ ಸಿಐಡಿ ಕಚೇರಿಯ ಹೊರ ಹೋಗುತ್ತಿದ್ದ. ಇದೇ ವೇಳೆ ಸ್ನೇಹಿತರಿಂದ‌ ಡಿವೈಸ್ ತರಿಸಿಕೊಂಡು ಸಿಐಡಿ ಅಧಿಕಾರಿಗಳ ಹಣ ರಿಕವರಿ ಪ್ರಶ್ನೆಗಳನ್ನೇ ರೇಕಾರ್ಡ್​ ಆರ್.ಡಿ.ಪಾಟೀಲ್ ಮಾಡಿದ್ದ. ಅದೇ ಆಡಿಯೋ ಮೂಲಕ ಸಿಐಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದ.

    ಇನ್ನು ಪದೇ ಪದೇ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಹಣದ ಆಮಿಶದ ಹಿನ್ನೆಲೆಯಲ್ಲಿ ಜೂಲೈ 9ರಿಂದ ಜೂಲೈ 16ರ ವೇಳೆ ಕಸ್ಟಡಿ ಸಮಯದಲ್ಲಿ ಸಿಐಡಿ ಅಧಿಕಾರಿಗಳಿಗೆ ಕಿಂಗ್​ಪಿನ್ ಆರ್​ಡಿ ಪಾಟೀಲ್ ಡೀಲ್ ಆಫರ್ ನೀಡಿದ್ದ. ಆರ್.ಡಿ ಪಾಟೀಲ್ ಹಣದ ಆಮಿಷದ ಬಗ್ಗೆ 2022ರ ಜೂಲೈನಲ್ಲಿಯೇ ಸಿಐಡಿ ಹಿರಿಯ ಅಧಿಕಾರಿಗಳಿಗೆ ಡಿವೈಎಸ್ ಪಿ ಶಂಕರಗೌಡ ದೂರು ನೀಡಿದ್ದರು. ಈ ದೂರಿನ ಅನ್ವಯ ಓರ್ವ ತನಿಖಾ ಅಧಿಕಾರಿಯನ್ನೂ ಸಿಐಡಿ ನೇಮಿಸಿತ್ತು. ಹಣದ ಆಮಿಶದ ಬಗ್ಗೆ ಆರ್.ಡಿ.ಪಾಟೀಲ್ ಈಗಾಗಲೇ ನೋಟಿಸ್ ಜಾರಿ ಸಿಐಡಿ ಮಾಡಿದೆ.

    ಆರೋಪಿ ಅರ್ ಡಿ ಪಾಟೀಲ್‌ ನ್ಯಾಯಾಲಯಕ್ಕೆ ಶರಣಾಗುವ ಮೊದಲೇ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ತನಿಖಾಧಿಕಾರಿ ವಿರುದ್ಧ ಆರೋಪ ಮಾಡಿದ್ದರು. ಜೂನ್ 16 ರಂದೇ ಸಿಐಡಿ‌ ಪೊಲೀಸರು ತನಿಖೆ ವೇಳೆ ಆರ್​ಡಿ ಪಾಟೀಲ್ ಹಣದ ಆಮಿಷ ತೊರಿಸುತ್ತಿದ್ದಾನೆ ಎಂದು ಮೇಲಾಧಿಕಾರಿಗಳಿಗೆ ಮಾಹಿತಿ‌ ನೀಡಿದ್ದರು. ವಿಚಾರಣೆ ವೇಳೆ ಆರೋಪಿ ಸಮರ್ಪಕ ಉತ್ತರ ಕೂಡ ನೀಡುತ್ತಿರಲಿಲ್ಲ. ಈತ ಉತ್ತರ ನೀಡಲಾಗದೆ ತನಿಖಾದಿಕಾರಿಗಳಿಗೆ ಹಣದ ಆಮಿಷ ತೋರಿಸಿದ್ದ. ಎರಡು ಕೋಟಿ ಹಣ ನೀಡುತ್ತೇನೆ, ಈ ಪ್ರಕರಣವನ್ನು ಇಲ್ಲಿಗೇ ಬಿಟ್ಟು ಬಿಡಿ ಎಂದು ಆರ್ ಡಿ ಪಾಟೀಲ್ ತನಿಖಾಧಿಕಾರಿಗೆ ಆಮಿಷ ಒಡ್ಡಿದ್ದನು. ಆಡಿಯೋದಲ್ಲಿ ಪೊಲೀಸರಿಗೆ ಆರ್​ಡಿ ಪಾಟೀಲ್ ಅಂದ್ರ ಹಬ್ಬದ ಊಟ ಎಂದಿದ್ದ. ‘ಈ ವಿಚಾರವಾಗಿ ಹಣ ಜಪ್ತಿ ‌ಮಾಡಿ‌ ರಿಕವರಿ ಮಾಡಿಕೊಳ್ಳಬೇಕಾಗಿದೆ. ಅದಕ್ಕೆ ನೀವು ಸಹಕರಿಸಬೇಕು ಎಂದು ತನಿಖಾದಿಕಾರಿಗಳು ಆರ್.ಡಿ.ಪಾಟೀಲ್ ಗೆ ಸೂಚಿಸಿದ್ದರು. ಆಗ ತನಿಖಾಧಿಕಾರಿಗಳು ‘ ತನಿಖೆಗೆ ಸಹಕರಿಸುವುದು ಬಿಟ್ಟು ಹಣದ ಅಮೀಷ ತೊರಿಸುವುದು ಸರಿಯಲ್ಲ’ ಎಂದಿದ್ದರು ಎಂದು ವರದಿಯಲ್ಲಿ ಉಲ್ಲೇಖ ಕೂಡ ಮಾಡಲಾಗಿದೆ.

    ಸಿಐಡಿಯವರು, ಆರ್​ಡಿ ಪಾಟೀಲ್​, ಪದೇ ಪದೇ ಹಣದ ಆಮೀಷದ ಬಗ್ಗೆ ಲೀಡ್ ಮಾಡಿ‌ ಆಹ್ವಾನ ನೀಡುತ್ತಿದ್ದ ಎಂದು ವರದಿ ಸಲ್ಲಿಸಿದ್ದರು. ಹಿಂದೆ ಹಲವು ಪರೀಕ್ಷೆಯಲ್ಲಿ ಸಿಕ್ಕಿ‌ಹಾಕಿಕೊಳ್ಳುವಾಗ ಪೊಲೀಸರಿಗೆ ಹಬ್ಬದ ಊಟ ಮಾಡಿಸಿದ್ದೇನೆ ಎಂದು ಆರ್​ಡಿಪಿ ಹೇಳುತ್ತಿದ್ದ. ತನಿಖೆಯ ವೇಳೆ ಆರೋಪಿ ‘ಆರ್​ಡಿಪಿ ಅಂದ್ರೆ ಪೋಲಿಸರಿಗೆ ಹಬ್ಬವೋ ಹಬ್ಬ.. ನೀವು ಮಾತ್ರ ಯಾಕೋ‌ ಹಬ್ಬದ ಊಟ ಮಾಡುತ್ತಿಲ್ಲ. ಇಂತಹ ಚಾನ್ಸ್ ಎಲ್ಲಿ ಸಿಗುತ್ತೆ. ಯಾವ ಎಕ್ಸಿಕ್ಯುಟಿವ್ ಪೊಸ್ಟ್ ನಲ್ಲೂ ಇಂತಹ ಹಣ ಮಾಡಿಕೊಳ್ಳಲು ಆಗುದಿಲ್ಲ’ ಎಂದು ಹೇಳುತ್ತಿದ್ದ..

    ಇದಕ್ಕೆ ಉತ್ತರಿಸಿದ್ದ ತನಿಖಾಧಿಕಾರಿ, ನಾನು ಬೇರೆ ಅಧಿಕಾರಿಗಳ ತರಹ ಅಲ್ಲಾ. ಅದಕ್ಕೆ ನಿಮ್ಮನ್ನು ದಸ್ತಗಿರಿ‌ಮಾಡಿ ವಿಚಾರಣೆ ನಡೆಸುತ್ತಿದ್ದೆನೆ. ಎಂದು ವರದಿಯಲ್ಲಿ ಸಿಐಡಿ‌ ತನಿಖಾದಿಕಾರಿ ಹೇಳಿರುವುದಾಗಿ ಉಲ್ಲೇಖ ಆಗಿದೆ. ಜೂಲೈ 16 ಪೋಲಿಸ್ ಕಸ್ಟಡಿ ಅವಧಿ‌ ಮುಕ್ತಾಯವಾಗಲಿದ್ದು ಮುಂದಿನ 15 ದಿನಗಳ‌ ಕಾಲ ನ್ಯಾಯಾಂಗ ಬಂಧನಕ್ಕೆ ಸಿಐಡಿ‌ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆರೋಪಿ ರುದ್ರಗೌಡ ಪಾಟೀಲ್​ಗೆ ಮೂರು ವಿಷಯಗಳ ಬಗ್ಗೆ ವಿಚಾರಣೆ ನಡೆಸಲಾಗಿತ್ತು.

    ಆಗ ಈತ ಸರಿಯಾದ ಮಾಹಿತಿ ನೀಡದೆ ತನಿಖಾದಿಕಾರಿಗಳಿಗೆ ಹಣದ ಆಮಿಷವೊಡ್ಡಿದ್ದ. ತನಿಖೆ ವೇಳೆ ಆರೋಪಿ ಪದೆ ಪದೇ ಹಣದ ಬಗ್ಗೆ ಮಾತನಾಡಿದ್ದು ಕಂಡು ಬಂದಿದ್ದು ಸಾಕಷ್ಟು ಬುದ್ದಿವಾದ ಹೇಳಿದ್ದರು ಆರ್​ಡಿಪಿ ಮಾತ್ರ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಹೀಗಾಗಿ ಪ್ರತ್ಯೇಕವಾಗಿ ವರದಿ ಸಲ್ಲಿಸಲಾಗುವುದು ಎಂದು ಸಿಐಡಿ ಅಧಿಕಾರಿಗಳು ವರದಿ ನೀಡಿದ್ದಾರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts