More

    ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್​ ಅಪಪ್ರಚಾರ ಮಾಡುತ್ತಿದೆ ಎಂದು ಸಚಿವ ಸುಧಾಕರ್ ಆರೋಪ…

    ಬೆಂಗಳೂರು: ಸಾಮಾಜಿಕ ಜಾಲತಾಣವು ಪ್ರಭಾವಿ, ಪರಿಣಾಮಕಾರಿಯಾಗಿದೆ. ಒಳ್ಳೆಯ ಹಾಗೂ ರಚನಾತ್ಮಕ ಕೆಲಸಗಳಿಗೆ ಬಳಸಲು ಉತ್ತಮ ವೇದಿಕೆಯಾಗಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ನಿಂದ ಸಾಮಾಜಿಕ ಜಾಲತಾಣ ದುರ್ಬಳಕೆಯಾಗುತ್ತಿದ್ದು,ಸರ್ಕಾರದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಆರೋಪಿಸಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪಕ್ಷದ ರಾಜ್ಯ ಸಾಮಾಜಿಕ ಜಾಲತಾಣ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ಕೆಲಸಗಳಿಂದ ರಾಜ್ಯ ಜನಪ್ರಿಯತೆ‌ ಹೆಚ್ಚಿಸಿಕೊಳ್ಳುತ್ತಿದೆ. ಇದನ್ನು ಮರೆಮಾಚಿ, ಜನರ ದಾರಿ ತಪ್ಪಿಸಲು ಕಳೆದ ಆರು‌ ತಿಂಗಳಿಂದ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಟ್ಡುಕಥೆ ಕಟ್ಟಿ, ಪದೇ ಪದೆ ಸುಳ್ಳು ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುವ ಕಸರತ್ತನ್ನು ಕಾಂಗ್ರೆಸ್​ ನಡೆಸಿದೆ. ಶೇಕಡ 40% ಕಮಿಷನ್ ಹಾಗೂ ಪಿಎಸ್ಐ ನೇಮಕ ಪರೀಕ್ಷಾ ಅಕ್ರಮದ ಬಗೆಗೆ‌ ನರೇಟಿವ್‌ ಸೆಟ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಪಕ್ಷ ನಕಾರಾತ್ಮಕ ರಾಜಕಾರಣ ಮಾಡುತ್ತಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿಜಿಟಲ್ ಮೀಡಿಯಾ ವೇದಿಕೆಯ ಮಹತ್ವ, ಪರಿಣಾಮ ಅರ್ಥ ಮಾಡಿಕೊಂಡಿರುವ ಬಿಜೆಪಿ, ಜನೋಪಯೋಗಿ, ‌ವ್ಯಾಪಕ ಪ್ರಚಾರ, ರಾಜಕೀಯ ಸಭೆ-ಸಮಾರಂಭಗಳಲ್ಲಿ ಜನರು ಸೇರಲು ಬಳಸುತ್ತಿದ್ದು, ಇದೇ ಅಸ್ತ್ರ ಬಳಸಿಕೊಂಡು ಕಾಂಗ್ರೆಸ್ ಗೆ ಸರಿಯಾದ ತಿರುಗೇಟು ನೀಡುವ ಅಗತ್ಯವಿದೆ ಎಂದರು. ‘ಕಾಂಗ್ರೆಸ್ ವಿರುದ್ಧ ನಾವು ಅಪಪ್ರಚಾರ ಮಾಡಬೇಕಾಗಿಲ್ಲ. ನಕಾರಾತ್ಮಕ ಚಟುವಟಿಕೆಗಳಿಗೆ ಸಾಮಾಜಿಕ ಜಾಲತಾಣ ಬಳಸುವುದು ಬೇಡ. ಆದರೆ ಡಬಲ್ ಇಂಜಿನ್ ಸರ್ಕಾರದ ಸಾಧನೆ, ಕೊಡುಗೆಗಳ ಬಗ್ಗೆ ಸಾರುವ ಮೂಲಕ ಜನರಿಗೆ ಮಾಹಿತಿ ನೀಡುವುದು, ಕಾಂಗ್ರೆಸ್ ಗೆ ಪ್ರತ್ಯಸ್ತ್ರ ಪ್ರಯೋಗಿಸುವುದು ಎರಡು ಏಕಕಾಲಕ್ಕೆ ನೆರವೇರಲಿದೆ ಎಂದು ಡಾ.ಕೆ.ಸುಧಾಕರ್ ಸಲಹೆ ನೀಡಿದರು.

    ರಾಜ್ಯ ಸರ್ಕಾರ ಅಭಿವೃದ್ಧಿ ವೇಗ ಹೆಚ್ಚಿಸಿದೆ.ಜನಪರ ಹಾಗೂ ದೂರದೃಷ್ಟಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತ ನೀಡುತ್ತಿದ್ದು, ಆರ್ಥಿಕತೆ ಬಲವರ್ಧನೆ ಜತೆಗೆ ಅಭಿವೃದ್ಧಿಯಲ್ಲಿ ಗಮನಾರ್ಹ ಸಾಧನೆಯಾಗಿದೆ ಎಂದು ಡಾ.ಕೆ.ಸುಧಾಕರ್ ವಿವರಿಸಿದರು. ಪಕ್ಷದ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಸಂಯೋಜಕ ಅಮಿತ್ ಮಲವಿಯ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts