

ಉತ್ತರ: ನೀವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಪ್ರಕರಣ ದಾಖಲಿಸಿದರೆ ಆರು ತಿಂಗಳ ನಂತರ ಹದಿನೆಂಟು ತಿಂಗಳ ಒಳಗೆ ನಿಮಗೆ ವಿಚ್ಛೇದನದ ಆದೇಶ ಸಿಗುತ್ತದೆ. (ಏಳನೇ ತಿಂಗಳಲ್ಲೂ ಸಿಗಬಹುದು).
ವಿಚ್ಛೇದನದ ಪ್ರಕರಣವನ್ನು ನಿಮ್ಮ ಊರಿನಲ್ಲಿ ಕೌಟುಂಬಿಕ ನ್ಯಾಯಾಲಯ ಇದ್ದರೆ ಅಲ್ಲಿ ದಾಖಲಿಸಿ . ಇಲ್ಲದೇ ಹೋದರೆ ನಿಮ್ಮ ತಾಲ್ಲೂಕಿನ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಬಹುದು.
ಮಕ್ಕಳ ವಿಷಯವಾಗಿ ಯಾರು ಏನೆಲ್ಲ ಮಾಡಬೇಕು ಮತ್ತು ಮಾಡಬಾರದು ಎನ್ನುವುದನ್ನು ನೀವಿಬ್ಬರೂ ದಂಪತಿಗಳೂ ಕೂತು ಮಾತಾಡಿ ತೀರ್ಮಾನಕ್ಕೆ ಬಂದು ಅದರ ವಿಷಯವನ್ನು ವಿಚ್ಛೇದನದ ಪ್ರಕರಣದಲ್ಲಿ ನೀವು ಸಲ್ಲಿಸಿರುವ ಅರ್ಜಿಯಲ್ಲಿ ನಮೂದಿಸಬೇಕು.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.