ಬೊಂಡಾಲ ಶಾಲೆಯಲ್ಲಿ ಪೌಷ್ಟಿಕ ಆಹಾರ ದಿನ

bondala school
ಬೊಂಡಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಾ ಸಪ್ತ ಪೌಷ್ಟಿಕ ಆಹಾರ ದಿನ, ಆಟಿದ ಗಮ್ಮತ್ತು ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ ಬೊಂಡಾಲ, ಪ್ರಭಾರ ಮುಖ್ಯಶಿಕ್ಷಕಿ ರೇಖಾ ಸಿ.ಎಚ್. ಮತ್ತಿತರರಿದ್ದರು.
Published on

ಬಂಟ್ವಾಳ: ತಾಲೂಕಿನ ಬೊಂಡಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಾ ಸಪ್ತ ಪೌಷ್ಟಿಕ ಆಹಾರ ದಿನ, ಆಟಿದ ಗಮ್ಮತ್ತು ಶನಿವಾರ ನಡೆಯಿತು.

ಪಾಲಕರು ಮನೆಯಲ್ಲಿ ತಯಾರಿಸಿ ತಂದ ಪೌಷ್ಟಿಕ ಆಹಾರಗಳ ಮಹತ್ವವನ್ನು ತಿಳಿಸಿ ಕೊಟ್ಟು ಸಹಭೋಜನ ಮಾಡಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ ಬೊಂಡಾಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಭಾರ ಮುಖ್ಯಶಿಕ್ಷಕಿ ರೇಖಾ ಸಿ.ಎಚ್. ಸ್ವಾಗತಿಸಿ, ಶಿಕ್ಷಕಿಯರಾದ ಲಾವಣ್ಯ ವಂದಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net