ಈ ದಿನಾಂಕಗಳಂದು ಜನಿಸಿದವರ ಅಧಿಪತಿ ಶನಿ: ಅದೃಷ್ಟ ಮತ್ತು ಯಶಸ್ಸು ಸದಾ ಇವರನ್ನು ಹಿಂಬಾಲಿಸುತ್ತೆ! Numerology

Numerology
Published on

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದೇ ಇದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು.

ಸಂಖ್ಯಾಶಾಸ್ತ್ರದ ಆಧಾರದ ಮೇಲೆ, ವ್ಯಕ್ತಿಯ ಜನ್ಮ ದಿನಾಂಕವು ಅವರ ಭವಿಷ್ಯದ ಜೀವನ ಮತ್ತು ಆರ್ಥಿಕ ವಿಷಯಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ನಾವೀಗ ಸಂಖ್ಯಾಶಾಸ್ತ್ರದಲ್ಲಿ ಎಂಟನೇ ಸಂಖ್ಯೆಯ ಅಡಿಯಲ್ಲಿ ಜನಿಸಿದ ಜನರು ಯಾವ ಗುಣಲಕ್ಷಣಗಳನ್ನು ಹೊಂದಿರುತ್ತಾರೆಂದು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಸಂಖ್ಯಾಶಾಸ್ತ್ರದಲ್ಲಿ 8ನೇ ಸಂಖ್ಯೆಗೆ ವಿಶೇಷ ಮಹತ್ವವಿದೆ. 8 ಸಂಖ್ಯೆಯು ಶನಿದೇವನ ಸಂಖ್ಯೆಯಾಗಿದೆ. ಹೀಗಾಗಿ 8, 17 ಮತ್ತು 26ನೇ ತಾರೀಖಿನಂದು ಜನಿಸಿದ ಜನರು 8ನೇ ಸಂಖ್ಯೆಯ ಅಧಿಪತಿಯಾದ ಶನಿಯಿಂದ ಆಳಲ್ಪಡುತ್ತಾರೆ. ಈ ಸಂಖ್ಯೆಯ ಪ್ರಭಾವದಡಿಯಲ್ಲಿ ಜನಿಸಿದವರು ನ್ಯಾಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿರುತ್ತಾರೆ ಮತ್ತು ಯಾವುದೇ ಕೆಲಸವನ್ನು ಶಾಂತತೆಯಿಂದ ಮತ್ತು ತಾಳ್ಮೆಯಿಂದ ಮಾಡುತ್ತಾರೆ.

ಬಲಗಳೇನು?

ಈ ಸಂಖ್ಯೆಯಲ್ಲಿ ಜನಿಸಿದ ಜನರ ತೀರ್ಮಾನ ಮತ್ತು ಮೌಲ್ಯಮಾಪನವು ಯಾವಾಗಲೂ ಸರಿಯಾದ ದಿಕ್ಕಿನಲ್ಲಿರುತ್ತದೆ. ಯಾವಾಗಲೂ ಎಲ್ಲವನ್ನೂ ಶಾಂತ ವರ್ತನೆಯಿಂದ ಮಾಡುತ್ತಾರೆ. ಯಾವುದೇ ವಿಷಯಗಳಲ್ಲಿ ಆತುರಪಡುವುದು ಮತ್ತು ಹಠಾತ್ ಪ್ರವೃತ್ತಿ ಇವರ ಗುಣವಲ್ಲ. ಹೀಗಾಗಿ ಬಹಳಷ್ಟು ತೊಂದರೆಗಳಿಂದ ಬಚಾವ್​ ಆಗುತ್ತಾರೆ. ಇವರಿಗೆ ಅದೃಷ್ಟ ಬಹಳ ವಿರಳ. ಆದರೆ, ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಯಶಸ್ಸನ್ನು ಹೊತ್ತು ತರುತ್ತದೆ. ಯಾವುದೇ ಪ್ಲಾನ್​ ಮಾಡಿದರೂ ತನ್ನ ಗುರಿಯೊಂದಿಗೆ ಸಾಗುವುದರಿಂದ ಯಶಸ್ಸು ಸಾಧಿಸುತ್ತಾರೆ. 8ನೇ ಸಂಖ್ಯೆಯು ವೃತ್ತಿಜೀವನದ ಏರಿಕೆ ಮತ್ತು ಪತನಕ್ಕೂ ಸಂಬಂಧಿಸಿದೆ. ಇದೇ ಅವರನ್ನು ವಿನಮ್ರ ಮತ್ತು ಸಂವೇದನಾಶೀಲರನ್ನಾಗಿ ಮಾಡಿದೆ. ನೀವು ಅನೇಕ ದುರಾದೃಷ್ಟಗಳನ್ನು ಎದುರಿಸಿದ್ದರೂ ಸಹ, ನಿಮ್ಮ ಆಶಾವಾದ ಎಲ್ಲವನ್ನು ಸರಿಪಡಿಸಬಹುದು.

ದೌರ್ಬಲ್ಯಗಳೇನು?

ನೀವು ಎಲ್ಲದರಲ್ಲೂ ನಾಯಕನಾಗಲು ಇಷ್ಟಪಡುತ್ತೀರಿ. ಆದ್ದರಿಂದ ಇನ್ನೊಬ್ಬರ ಕೆಳಗೆ ಕೆಲಸ ಮಾಡಬೇಕಾದಾಗ ನಿಮಗೆ ಸರಿಹೊಂದುವುದಿಲ್ಲ. ಯಾವುದೇ ಆದೇಶಗಳನ್ನು ಪಾಲಿಸುವುದು ನಿಮಗೆ ಇಷ್ಟವಾಗುವುದಿಲ್ಲ ಮತ್ತು ಹೊಂದಿಕೊಳ್ಳುವುದು ನಿಮಗೆ ಕಷ್ಟಕರವಾಗಿರುತ್ತದೆ. ನೀವು ಸ್ವ-ಸದಾಚಾರದ ಪ್ರಜ್ಞೆಯನ್ನು ಹೊಂದಿರುವುದರಿಂದ, ನಿಮಗೆ ತಿಳಿದಿರುವುದನ್ನು ನೀವು ಸತ್ಯ ಎಂದು ನಂಬುತ್ತೀರಿ. ನಿಮ್ಮ ಆದರ್ಶಗಳನ್ನು ಹೊಂದಿರದವರನ್ನು ವಿರೋಧಿಸುತ್ತೀರಿ. ಇದು ನಿಮ್ಮನ್ನು ಸಮಸ್ಯಾತ್ಮಕ ಸಂದರ್ಭಗಳಲ್ಲಿ ಸಿಲುಕುವಂತೆ ಮಾಡುತ್ತದೆ. ತಪ್ಪು ಮತ್ತು ಅನ್ಯಾಯ ಎಂದು ಗೊತ್ತಾದಾಗ ಅದನ್ನು ಬಿಟ್ಟುಕೊಡಲು ಇಷ್ಟಪಡುವುದಿಲ್ಲ. ಎಲ್ಲವೂ ನಿಮಗೆ ನ್ಯಾಯಯುತವಾಗಿರಬೇಕು. ಆದರೆ, ನಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳು ಸಹ ಇವೆ. ಅವು ನೈತಿಕವಾಗಿ ತಪ್ಪಾಗಿದ್ದರೂ ಸಹ ನಾವು ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.

ಯಾವುದೇ ಒಂದು ವಿಷಯವು ನಿಮ್ಮನ್ನು ಆಕರ್ಷಿಸುವುದು ಅಥವಾ ನಿಮ್ಮನ್ನು ಸಂತೋಷಪಡಿಸುವುದು ಬಹಳ ಅಪರೂಪ. ಏಕೆಂದರೆ ನೀವು ಲೌಕಿಕ ವಿಷಯಗಳನ್ನು ತುಂಬಾ ಮೋಜಿನಿಂದ ಕಾಣುವುದಿಲ್ಲ. ಕೆಲವೊಮ್ಮೆ ನೀವು ನಿಮ್ಮ ನಿಜವಾದ ಭಾವನೆಗಳ ಬಗ್ಗೆ ಗೊಂದಲಕ್ಕೆ ಒಳಗಾಗುತ್ತೀರಿ. ಇದು ನಿಮ್ಮನ್ನು ಕೆಲವು ಜನರಿಂದ ದೂರವಿಡಬಹುದು. ಏಕೆಂದರೆ, ನೀವು ಯಾವ ರೀತಿಯ ವ್ಯಕ್ತಿ ಎಂದು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.

ಅಂದಹಾಗೆ 8ನೇ ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಕಪ್ಪು, ಕಡು ನೀಲಿ, ಬೂದು ಮತ್ತು ನೇರಳೆ ಬಣ್ಣಗಳು ಪ್ರಯೋಜನಕಾರಿಯಾಗಿರುವುದರಿಂದ ಅವುಗಳನ್ನು ಬಳಸಬಹುಸು. ಈ ಬಣ್ಣಗಳನ್ನು ಬಟ್ಟೆ, ದಿಂಬಿನ ಕವರ್, ಬೆಡ್ ಶೀಟ್‌ಗಳು ಮತ್ತು ಗೋಡೆಯ ಬಣ್ಣಗಳಲ್ಲಿ ಬಳಸಬಹುದು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net