ಮತ್ತೆ ಮುಂದುವರಿಯಲಿದೆ ವಿಶ್ವ ಹಿಂದೂ ಪರಿಷತ್ ಯಾತ್ರೆ; ಮಹಾ ಪಂಚಾಯತ್​ನಲ್ಲಿ ನಿರ್ಧಾರ

VHP
Published on

ನವದೆಹಲಿ: ವಿಶ್ವ ಹಿಂದೂ ಪರಿಷತ್​ ಆಯೋಜಿಸಿದ್ದ ಬ್ರಜ್ ಮಂಡಲ್ ಯಾತ್ರೆ ಮತ್ತೆ ಮುಂದುವರಿಯಲಿದೆ. ಗಲಭೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಯಾತ್ರೆಯನ್ನು ಇದೇ ಆಗಸ್ಟ್ 28ರಿಂದ ಮುಂದುವರಿಸಲು ಇಂದು ನಿರ್ಧಾರ ತಳೆಯಲಾಗಿದೆ.

ಹರ್ಯಾಣದ ಪೊಂಡ್ರಿ ಗ್ರಾಮದಲ್ಲಿ ಇಂದು ವಿಶ್ವ ಹಿಂದೂ ಪರಿಷತ್​ನಿಂದ ನಡೆದ ಮಹಾಪಂಚಾಯತ್​ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ನುಹ್​ನ ನಲ್ಹರ್​ನಲ್ಲಿ ಆ. 28ರಂದು ಮರು ಆರಂಭಗೊಳ್ಳಲಿರುವ ಈ ಬ್ರಜ್ ಮಂಡಲ್ ಯಾತ್ರೆ ಫಿರೋಜ್​ಪುರ ಝಿರ್ಕಾಸ್​ನ ಝಿರ್ ಮತ್ತು ಸಿಂಗಾರ್ ದೇವಸ್ಥಾನಗಳ ಮೂಲಕ ಮುಂದುವರಿಯಲಿದೆ.

ವಿಶ್ವ ಹಿಂದೂ ಪರಿಷತ್ ಆರಂಭಿಸಿದ್ದ ಬ್ರಜ್ ಮಂಡಲ್ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಜು. 31 ನುಹ್ ಬಳಿ ನಡೆದ ಗಲಭೆಯಲ್ಲಿ ಇಬ್ಬರು ಹೋಮ್​ಗಾರ್ಡ್ಸ್​ ಮತ್ತು ಒಬ್ಬ ಕ್ಲರ್ಕ್ ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದು, ಪರಿಸ್ಥಿತಿ ಪಕ್ಷುಬ್ಧಗೊಂಡಿದ್ದರಿಂದ ಯಾತ್ರೆ ಸ್ಥಗಿತಗೊಂಡಿತ್ತು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net