ಜೂ.ಎನ್​ಟಿಆರ್​ 'ದೇವರಾ'ಗೆ ಹೆಚ್ಚಿದ ನಿರೀಕ್ಷೆ: 'ಚುಟಮಲ್ಲೆ' ಹಾಡಿಗೆ ಯುವಜನ ಫಿದಾ!

devara
Published on

ಹೈದರಾಬಾದ್​: ಉಡುಲಿ ಶ್ರೀಕೃಷ್ಣ ನ ದರ್ಶನ ಮತ್ತು ತಾಯಿತವರು ಕುಂದಾಪುರಕ್ಕೆ ಜೂ.ಎನ್​ಟಿಆರ್​ ಇತ್ತೀಚೆಗಷ್ಟೇ ಭೇಟಿ ನೀಡಿ ಹೋಗಿರುವುದು ತಿಳಿದ ಸಂಗತಿಯೇ. ಇನ್ನು ಎನ್‌ಟಿಆರ್‌-ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ದೇವರ' ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಗರಿಗೆದರಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಚುಟಮಲ್ಲೆ ಹಾಡು ಸೂಪರ್ ಹಿಟ್ ಆಗಿದ್ದು, ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಈ ಹಾಡಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರನ್ನು ಕೆರಳಿಸುತ್ತಿದೆ.

ಆರ್‌ಆರ್‌ಆರ್‌ ನಂತರ ಎನ್‌ಟಿಆರ್‌ ಅವರ ಚಿತ್ರವಾಗಿರುವುದರಿಂದ ಅಭಿಮಾನಿಗಳು 'ದೇವರಾ' ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಚಿತ್ರದ ಎರಡನೇ ಸಿಂಗಲ್ ಸಾಂಗ್ ಜಾನ್ವಿ ಕಪೂರ್-ಜೂ ಎನ್‌ಟಿಆರ್ ಮೇಲೆ ಚಿತ್ರೀಕರಿಸಿದ 'ಚುಟ್ಟಮಲ್ಲೆ' ಇತ್ತೀಚೆಗೆ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮನಸೂರೆಗೊಂಡಿದೆ.

ಚುಟ್ಟಮಲ್ಲೆ' ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂದರೆ ಈ ಹಾಡಿನ ಮೇಲೆ ರೀಲ್ಸ್​ ನಿತ್ಯ ಬರುತ್ತಲೇ ಇವೆ. ಇನ್​ಸ್ಟಾಗ್ರಾಮ್​ನಲ್ಲಿ ಈ ಹಾಡು ಸಾವಿರಾರು ರೀಲ್‌ಗಳನ್ನು ಪಡೆದುಕೊಂಡಿದೆ. ಕಾಲರ್ ಟ್ಯೂನ್‌ಗಳು ಮತ್ತು ರಿಂಗ್ ಟೋನ್‌ಗಳಿಗೆ ಲೆಕ್ಕವೇ ಇಲ್ಲ. ಇತ್ತೀಚೆಗೆ ಈ ಹಾಡಿಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಬಸ್ಸಿನ ತುಂಬೆಲ್ಲಾ ಕಾಲೇಜು ಹುಡುಗಿಯರೇ ಇರುತ್ತಾರೆ. ಡ್ರೈವರ್ 'ಚುಟಮಲ್ಲೆ' ಹಾಡನ್ನು ಪ್ಲೇ ಮಾಡುತ್ತಾನೆ. 29 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಹುಡುಗಿಯರು ಕೋರಸ್ ಕೊಡುತ್ತಾರೆ. ನಕ್ಕು ತಮ್ಮ ನಾಲಿಗೆ ಮೇಲೆ ನಲಿಯುವಂತೆ ಮಾಡುತ್ತಾರೆ. ಇದು ನೆಟಿಜನ್‌ಗಳ ಮನ ಗೆದ್ದಿದೆ. ಹುಡುಗಿಯರು ಸದಾ ಹೀಗೆ ನಗುತ್ತಿದ್ದರೆ ಉತ್ತಮ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟು ಮಧುರವಾದ ಹಾಡನ್ನು ನೀಡಿದ ಅನಿರುದ್ಧ್ ಅವರಿಗೆ ಧನ್ಯವಾದಗಳು ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಎನ್ಟಿಆರ್- ಜಾನ್ವಿ ಕಪೂರ್ ಅಭಿನಯದ ದೇವರ ಚಿತ್ರ ಸೆ.27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೊರಟಾಲ ಶಿವ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net