ಹೈದರಾಬಾದ್: ಟಾಲಿವುಡ್ ಸೂಪರ್ಸ್ಟಾರ್ ಜೂನಿಯರ್ ಎನ್‌ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುತ್ತಿದೆ. ಸದ್ಯ ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ.
ಜೂ. ಎನ್‌ಟಿಆರ್ ಅವರು ಇತ್ತೀಚೆಗಷ್ಟೇ ವಾಣಿಜ್ಯ ನಗರಿ ಮುಂಬೈನಲ್ಲಿ ದೇವರ ಟ್ರೈಲರ್ ಲಾಂಚ್ ಜೊತೆಗೆ ಚಿತ್ರದ ಪ್ರಚಾರಗಳನ್ನು ಮಾಡಿದ್ದಾರೆ. ಈ ವೇಳೆ ಎನ್‌ಟಿಆರ್ ಮತ್ತು ದೇವರ ತಂಡ ಬ್ಲಾಕ್ಬಸ್ಟರ್ ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿತು. ಈ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಚಿತ್ರತಂಡ ಬಿಚ್ಚಿಟ್ಟಿದೆ.
ಸಂದರ್ಶನದಲ್ಲಿ ಸಿನಿಮಾದ ಅದ್ಧೂರಿ ಆ್ಯಕ್ಷನ್ ಸೀಕ್ವೆನ್ಸ್ ಕುರಿತು ಚಿತ್ರತಂಡ ಹೆಚ್ಚು ಮಾತನಾಡಿತು. ನೀರೊಳಗಿನ ಆ್ಯಕ್ಷನ್ ಸೀಕ್ವೆನ್ಸ್‌ಗಾಗಿ ಸ್ಟುಡಿಯೊದಲ್ಲಿ ದೊಡ್ಡ ನೀರಿನ ಹೊಂಡವನ್ನೇ ನಿರ್ಮಾಣ ಮಾಡಿದ್ದೆವು. ಮಾನವ ನಿರ್ಮಿತ 200 ನೀರಿನ ಟ್ಯಾಂಕ್‌ಗಳನ್ನು ಸ್ಥಾಪಿಸಿದ್ದೆವು. ಸುಮಾರು 35 ದಿನಗಳ ಕಾಲ ನೀರಿನ ಅಡಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ದೇವರ ಸಿನಿಮಾದ ಪ್ರಮುಖ ಹೈಲೆಟ್ಸ್ ಇದೇ ಆಗಿದೆ. ಇಡೀ ಚಿತ್ರದಲ್ಲಿ ಸಾಕಷ್ಟು ನೀರಿನ ಅಂಶಗಳನ್ನು ಬಳಸಿದ್ದೇವೆ.
ಆ್ಯಕ್ಷನ್ ಸೀಕ್ವೆನ್ಸ್‌ಗಾಗಿ ಮೋಟಾರು ದೋಣಿಗಳು, ಅಲೆಗಳನ್ನು ಸೃಷ್ಟಿಸುವ ಯಂತ್ರಗಳನ್ನು ಬಳಸಿ, ಸಮುದ್ರದಲ್ಲಿ ನಿಜವಾದ ಹೋರಾಟದಂತೆ ಕಾಣಲು ಸಾಕಷ್ಟು ಖರ್ಚು ಮಾಡಿದೆವು. ಆ ದೃಶ್ಯಕ್ಕಾಗಿ ನಾವು ಶ್ರಮಪಟ್ಟಿದ್ದೇವೆ. ಶಾರ್ಕ್ ಜೊತೆಗಿನ ದೃಶ್ಯವಂತೂ ವರ್ಣಿಸಲಾಗದು. 15 ಸೆಕೆಂಡ್‌ಗಳ ದೃಶ್ಯಕ್ಕಾಗಿ ಇಡೀ ದಿನ ಚಿತ್ರೀಕರಣ ಮಾಡಿದ್ದೇವೆ. ನೀರಿನ ಅಡಿಯಲ್ಲಿ ಶೂಟಿಂಗ್ ಮಾಡುವಾಗ ಕೆಲವೊಮ್ಮೆ ಸರಿಯಾಗಿ ಗೋಚರವಾಗುವುದಿಲ್ಲ. ಈ ಎಲ್ಲ ಅಡ್ಡಿಗಳನ್ನು ಲೆಕ್ಕಿಸದೇ ಶೂಟಿಂಗ್ ಮಾಡಿದ್ದೇವೆ ಎಂದು ದೇವರ ಚಿತ್ರತಂಡ ಹೇಳಿತು.
ದೇವರ ಸಿನಿಮಾದಲ್ಲಿ ಅದ್ಧೂರಿ ವಾಟರ್ ಆ್ಯಕ್ಷನ್ ಸೀಕ್ವೆನ್ಸ್ ಇರಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಎನ್‌ಟಿಆರ್ ಕೂಡ ತುಂಬಾ ಕಷ್ಟಪಟ್ಟಿದ್ದಾರೆ ಎಂಬುದು ಎನ್ ಟಿಆರ್ ಅವರ ಮಾತಿನಿಂದಲೇ ಸ್ಪಷ್ಟವಾಗಿದೆ. ಎನ್ ಟಿಆರ್ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ದೇವರ ಚಿತ್ರ ಎಷ್ಟು ದೊಡ್ಡ ಹಿಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!
ಧೋನಿ, ಕೊಹ್ಲಿಗಿಂತ ಈತನೇ ಟೀಮ್ ಇಂಡಿಯಾದ ಶ್ರೇಷ್ಠ ಕ್ರಿಕೆಟಿಗ! ಇವರೇ ನೋಡಿ ಯುವಿ ಮೆಚ್ಚಿದ ಆಟಗಾರ