

ನವದೆಹಲಿ: ಕೋವಿಡ್-19 ನಿಂದಾದ ತೊಂದರೆಯಿಂದಾಗಿ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವಿವಿಧ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕನ್ನು ಮುಂದೂಡಿದೆ.
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪಿಎಚ್ಡಿ ಮತ್ತು ಒಪಿಇಎನ್ಎಂಎಟಿ (ಎಂಬಿಎ) ಪ್ರವೇಶ ಪರೀಕ್ಷೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಏಐಇಇಎ, ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ, ಯುಜಿಸಿ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (ಯುಜಿಸಿ ನೆಟ್) ಜೂನ್ 2020, ಜಾಯಿಂಟ್ ಸಿಎಸ್ಐಆರ್- ಯುಜಿಸಿ ಎನ್ಇಟಿ ಪರೀಕ್ಷೆ (ಸಿಎಸ್ಐಆರ್ ಯುಜಿಸಿ ಎನ್ಇಟಿ) ಜೂನ್ 2020, ಆಲ್ ಇಂಡಿಯಾ ಆಯುಷ್ ಪೋಸ್ಟ್ ಗ್ರಾಜುಯೇಟ್ ಎಂಟ್ರೆನ್ಸ್ ಟೆಸ್ಟ್ (ಎಐಎಪಿಜಿಇಟಿ) ಪರೀಕ್ಷೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಈ ಹಿಂದೆ ಜೂನ್ 15 ರಂದು ಕೊನೆ ದಿನ ಎಂದು ನಿರ್ಧರಿಸಲಾಗಿತ್ತು. ಆದರೆ ಎನ್ಟಿಎ ಈ ಅವಧಿ ವಿಸ್ತರಸಿದ್ದು ಜೂನ್ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಆನ್ಲೈನ್ ಅರ್ಜಿಯನ್ನು ಸಂಜೆ 5 ಗಂಟೆಯ ವರೆಗೆ ಹಾಗೂ ಶುಲ್ಕವನ್ನು ಕ್ರೆಡಿಟ್ / ಡೆಬಿಟ್ ಕಾರ್ಡ್/ ಮೆಟ್ ಬ್ಯಾಂಕಿಂಗ್/ ಯುಪಿಐ ಮತ್ತು ಪೇಟಿಎಮ್ ಮೂಲಕ ರಾತ್ರಿ 11.50ರವರೆಗೆ ಸಲ್ಲಿಸಬಹುದು.
ಆಯಾ ಪರೀಕ್ಷೆ ವೆಬ್ಸೈಟ್ ಹಾಗೂ ಎನ್ಟಿಎ ವೆಬ್ಸೈಟ್ನಲ್ಲಿ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾದ ದಿನಾಂಕನ್ನು ನಂತರ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಆಯಾ ವೆಬ್ಸೈಟ್ ಅಥವಾ ಎನ್ಟಿಎ ವ್ಯಬ್ ಸೈಟ್ ಅಥವಾ 8287471852, 8178359845, 9650173668, 9599676953, 8882356803 ದೂರವಾಣಿ ಸಂಪರ್ಕಿಸಬಹುದು ಎಂದು ಪ್ರಕರಣೆ ತಿಳಿಸಿದೆ.